Sunday, 15th December 2024

ಜಾಗತಿಕ ವಹಿವಾಟು: ಸಂವೇದಿ ಸೂಚ್ಯಂಕದಲ್ಲಿ 400 ಅಂಕ ಏರಿಕೆ

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ವಹಿವಾಟಿನ ಪರಿಣಾಮ ಶುಕ್ರವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕದಲ್ಲಿ 400 ಅಂಕಗಳ ಏರಿಕೆಯಾಗಿದೆ.

ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚಿನ ಲಾಭಗಳಿಸಿದೆ. ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 400.87 ಅಂಕಗಳ ಏರಿಕೆ ಯಾಗಿದ್ದು, 60,320.56 ಅಂಕಗಳಲ್ಲಿ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 120.10 ಅಂಕಗಳ ಏರಿಕೆಯೊಂದಿಗೆ 17,993.70 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟೆಕ್ ಮಹೀಂದ್ರ, ಇನ್ಫೋಸಿಸ್, ಟಾಟಾ ಸ್ಟೀಲ್, ಸನ್ ಫಾರ್ಮಾ ಮತ್ತು ನೆಸ್ಲೆ ಇಂಡಿಯಾ ಷೇರು ಗಳು ಲಾಭ ಗಳಿಸಿದೆ.

ಗುರುವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 433.13 ಅಂಕ ಕುಸಿದಿದ್ದು, 59,919.69 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಎನ್ ಎಸ್ ಇ ನಿಫ್ಟಿ 143.60 ಅಂಕಗಳಷ್ಟು ಇಳಿಕೆಯಾಗಿದ್ದು, 17,873.60 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.