Sunday, 15th December 2024

ಬಿಸಿಲ ಧಗೆಗೆ ದೆಹಲಿ ತತ್ತರ: 46 ಡಿಗ್ರಿ ತಾಪಮಾನ

ನವದೆಹಲಿ: ಬಿಸಿಲ ಧಗೆಗೆ ರಾಜಧಾನಿ ದೆಹಲಿ ತತ್ತರಿಸಿ ಹೋಗಿದ್ದು, ಬುಧವಾರ ದೆಹಲಿಯಲ್ಲಿ 46 ಡಿಗ್ರಿ ತಾಪಮಾನ ದಾಖಲಾ ಗಿದೆ.

ಕಳೆದ ಮಂಗಳವಾರ 43 ಡಿಗ್ರಿ ತಾಪಮಾನ ಇದ್ದ ದೆಹಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 3 ಡಿಗ್ರಿ ತಾಪಮಾನ ಏರಿಕೆಯಾಗಿ 46 ಡಿಗ್ರಿಗೆ ತಲು ಪಿದೆ. ಆ ಮೂಲಕ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ದೆಹಲಿಯ ಸಫ್ದರ್‌ಜಂಗ್ ವೀಕ್ಷಣಾಲಯವು ಮಂಗಳವಾರ ಗರಿಷ್ಠ 40.8 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿತ್ತು. ಗುರುವಾರದ ವೇಳೆಗೆ 44 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಏಪ್ರಿಲ್ 21, 2017 ರಂದು ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 43.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅಂತೆಯೇ ಏಪ್ರಿಲ್ 29, 1941 ರಂದು ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನವು 45.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಕಳೆದ ವಾರ ಮಾರ್ಚ್‌ನಿಂದ ವಾಯುವ್ಯ ಭಾರತವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದೆ.

ಎಲ್ಲೋ ಅಲರ್ಟ್ ಘೋಷಿತ ಪ್ರದೇಶಗಳಲ್ಲಿ ಜನರು ಶಾಖಕ್ಕೆ ಒಡ್ಡಿಕೊಳ್ಳುವು ದನ್ನು ತಪ್ಪಿಸಬೇಕು, ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆ ಗಳನ್ನು ಧರಿಸಬೇಕು ಮತ್ತು ಬಟ್ಟೆ, ಟೋಪಿ ಅಥವಾ ಛತ್ರಿ ಇತ್ಯಾದಿಗಳನ್ನು ಬಳಸಿ ತಲೆಯನ್ನು ಮುಚ್ಚ ಬೇಕು ಎಂದು ಐಎಂಡಿ ಹೇಳಿದೆ.

ಹವಾಮಾನ ಇಲಾಖೆ ನಾಲ್ಕು ಬಗೆಯ ಅಲರ್ಟ್ ಘೋಷಣೆ ಮಾಡುತ್ತಿದ್ದು, ಹಸಿರು (ಯಾವುದೇ ಕ್ರಮ ಅಗತ್ಯವಿಲ್ಲ), ಹಳದಿ (ವೀಕ್ಷಿಸಿ ಮತ್ತು ನವೀಕರಿಸಿ), ಕಿತ್ತಳೆ (ಸಿದ್ಧರಾಗಿರಿ) ಮತ್ತು ಕೆಂಪು (ಕ್ರಮ ತೆಗೆದುಕೊಳ್ಳಿ) ಎಂಬ ಅಲರ್ಟ್ ನೀಡುತ್ತದೆ.