Sunday, 15th December 2024

46,617 ಹೊಸ ಕರೋನಾ ಪ್ರಕರಣ ಪತ್ತೆ

#corona

ನವದೆಹಲಿ : ಭಾರತದಲ್ಲಿ ಶುಕ್ರವಾರ 46,617 ಹೊಸ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಸತತ ಐದು ದಿನಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಸೋಂಕುಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

46,617 ಹೊಸ ಪ್ರಕರಣಗಳ ದಾಖಲಾಗುವ ಮೂಲಕ ಭಾರತದ ಒಟ್ಟು ಸೋಂಕುಗಳ ಸಂಖ್ಯೆಯನ್ನು 30,458,251 ಕ್ಕೆ ಏರಿಕೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ 853 ಸಾವುಗಳನ್ನು ದಾಖಲಿಸಿದೆ.ಈವರೆಗೆ 400,312 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ. ಕನಿಷ್ಠ 59,384 ಜನರು ಚೇತರಿಸಿಕೊಂಡಿ ದ್ದಾರೆ.