Tuesday, 15th October 2024

ವಿದ್ಯುತ್ ಅವಘಡ: ಐವರು ಸ್ಥಳದಲ್ಲೇ ಸಾವು

ತ್ತರ ಪ್ರದೇಶ: ಬಹ್ರೈಚ್ ಜಿಲ್ಲೆಯಲ್ಲಿ ಭಾನುವಾರ ವಿದ್ಯುತ್ ಅವಘಡ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೆರವಣಿಗೆ ವೇಳೆ ಭಾಗವಹಿಸಿದ್ದ ವೇಳೆ ಈ ಅವಘಡ ನಡೆದಿದೆ. ಮೆರವಣಿಗೆಯ ಗಾಡಿಗೆ ಅಳವಡಿಸಲಾಗಿದ್ದ ಹೈಟೆನ್ಷನ್ ತಂತಿಯ ಕಬ್ಬಿಣದ ರಾಡ್‌ಗೆ ವ್ಯಕ್ತಿಗಳು ಸ್ಪರ್ಶಿಸಿದ ನಂತರ ಈ ಘಟನೆ ನಡೆದಿದೆ.

ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ಸಾಗಿಸಲ್ಟಟ್ಟ ಮತ್ತೊಬ್ಬ ವ್ಯಕ್ತಿ ಮಾರ್ಗಮಧ್ಯ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಹ್ರೈಚ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.