Sunday, 15th December 2024

500ಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಒಂದೇ ದಿನ 500ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಶನಿವಾರ ಒಟ್ಟಾರೆ 526 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,915ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ಶನಿವಾರ ಒಂದೇ ದಿನ ಪ್ರಕರಣಗಳಲ್ಲಿ ಗಮನಾರ್ಹ ಜಿಗಿತ ಕಂಡುಬಂದಿದೆ. ಒಟ್ಟಾರೆ 843 ಹೊಸ ಸೋಂಕುಗಳು ವರದಿಯಾಗಿವೆ. ಇದು ಕಳೆದ 126 ದಿನಗಳ ನಂತರ ಅತಿ ಹೆಚ್ಚು ಕೇಸ್‌ ದಾಖಲಾ ದಂತಾಗಿದೆ. ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿಗೆ ಒಬ್ಬೊಬ್ಬರು ಮೃತ ಪಟ್ಟಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಲತಾಣದಲ್ಲಿರುವ ಮಾಹಿತಿಯ ಪ್ರಕಾರ, ಈವರೆಗೆ 220.05 ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.