Saturday, 14th December 2024

ಬಾಂಬೆ ಷೇರುಪೇಟೆ ಸೆನ್ಸೆಕ್ಸ್: 550 ಅಂಕಗಳ ಕುಸಿತ

ಮುಂಬೈ: ಮುಂದುವರಿದ ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ಮಂಗಳವಾರವೂ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 550ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.

ಸಂವೇದಿ ಸೂಚ್ಯಂಕ 559.46 ಅಂಕ ಇಳಿಕೆಯೊಂದಿಗೆ 55,115.86 ಅಂಕಗಳಲ್ಲಿ ವಹಿವಾಟು, ಎನ್ ಎಸ್ ಇ ನಿಫ್ಟಿ ಕೂಡ 161.05 ಅಂಕಗಳಷ್ಟು ಕುಸಿತದೊಂದಿಗೆ 16,408.50 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಮೂರನೇ ವಹಿವಾಟಿನಲ್ಲೂ ಸೆನ್ಸೆಕ್ಸ್ ಕುಸಿತಗೊಂಡ ಪರಿಣಾಮ ಟೈಟಾನ್, ಡಾ.ರೆಡ್ಡೀಸ್, ಎಚ್ ಯುಎಲ್, ಏಷಿಯನ್ ಪೇಂಟ್ಸ್, ನೆಸ್ಲೆ, ಸನ್ ಫಾರ್ಮಾ, ಮಾರುತಿ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಭಾರೀ ನಷ್ಟ ಕಂಡಿವೆ.

ಟೋಕಿಯೋ, ಶಾಂಘೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ಕಂಡಿದ್ದು, ಹಾಂಗ್ ಕಾಂಗ್, ಸಿಯೋಲ್ ಷೇರುಪೇಟೆ ಸೆನ್ಸೆಕ್ಸ್ ಇಳಿಕೆಯಲ್ಲಿ ವಹಿವಾಟು ಮುಂದುವರಿದಿದೆ.