ಮುಂಬೈ: ಥಾಣೆಯ 66 ಶಿವಸೇನೆ ಕಾರ್ಪೊರೇಟರ್ಗಳು ಗುರುವಾರ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಾಳೆಯಕ್ಕೆ ಸೇರ್ಪಡೆಗೊಂಡಿದ್ದಾರೆ.
ಪ್ರಸ್ತುತ ಶಿವಸೇನೆಯು ಎರಡು ಬಣಗಳಾಗಿ ವಿಭಜಿಸಲ್ಪಟ್ಟಿದೆ. ಒಂದು ಉದ್ಧವ್ ಠಾಕ್ರೆ ಮತ್ತು ಇನ್ನೊಂದು ಏಕನಾಥ್ ಶಿಂಧೆ ಬಣವಾಗಿ ಮಾರ್ಪಟ್ಟಿದೆ. ಕಳೆದ ಕೆಲ ದಿನಗಳ ಶಿಂಧೆ ಯವರು ಶಿವಸೇನೆ ವಿರುದ್ಧ ಭಂಡಾಯವೆದ್ದು, ಸರ್ಕಾರವನ್ನು ಬುಡಮೇಲು ಮಾಡಿ ನೂತನ ಬಿಜೆಪಿ ಸರ್ಕಾರವನ್ನು ರಚಿಸಿದ್ದಾರೆ.
ಶಿಂಧೆ ಶಿವಸೇನೆಯಿಂದ ದೂರವಾದ ಬಳಿಕ ಅವರನ್ನು ಉಪಮುಖ್ಯಮಂತ್ರಿ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ಶಿಂಧೆ ಅವರಿಗೆ ಸಿಎಂ ಸ್ಥಾನ ನೀಡುವ ಮೂಲಕ ಹಲವರಿಗೆ ಅಚ್ಚರಿಗೊಳಿಸಿದೆ.