2015 ರಿಂದ ಸರ್ಕಾರವು ತನ್ನ ಸಾಧನೆಗಳು, ಪ್ರಕಟಣೆಗಳು, ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಮತ್ತು ಯೋಜನೆಗಳ ಜಾಹೀರಾತುಗಳಿಗಾಗಿ ಪತ್ರಿಕೆ ಗಳು, ಬ್ಯಾನರ್ಗಳು, ಇಂಟರ್ನೆಟ್, ಟಿವಿ ಮತ್ತು ರೇಡಿಯೊ ಇತ್ಯಾದಿಗಳಿಗೆ ಪ್ರತಿವರ್ಷ ಖರ್ಚು ಮಾಡಿದ ಮೊತ್ತದ ಕುರಿತು ವಿವರ ನೀಡುವಂತೆ ಅಹ್ಮದ್ ಕೇಳಿದ್ದರು.
ಈ ಅವಧಿಯಲ್ಲಿ ಪತ್ರಿಕೆಗಳ ಜಾಹೀರಾತಿಗಾಗಿ ₹ 596 ಕೋಟಿ, ಟಿವಿ ಜಾಹೀರಾತುಗಳಿಗೆ ₹ 96.34 ಕೋಟಿ, ರೇಡಿಯೋಗೆ ₹ 21.76 ಕೋಟಿ, ಇಂಟರ್ನೆಟ್ಗೆ ₹ 1.19 ಕೋಟಿ ಮತ್ತು ಬ್ಯಾನರ್ಗಳಿಗೆ ₹ 4.39 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.