Saturday, 14th December 2024

ಜಾಹೀರಾತಿಗಾಗಿ ₹ 700 ಕೋಟಿ ವ್ಯಯಿಸಿತ್ತು ಈ ಸರ್ಕಾರ ?

Haryana Govt

ಚಂಡೀಗಡ: ಸಾಧನೆ, ಘೋಷಣೆಗಳು ಮತ್ತು ಯೋಜನೆ(2015 ರಿಂದೀಚೆಗೆ) ಗಳನ್ನು ವಿವರಿಸುವ ಸಲುವಾಗಿ ಹರಿಯಾಣದ ಬಿಜೆಪಿ ಸರ್ಕಾರ  ಜಾಹಿರಾತಿ ಗಾಗಿ ₹ 700 ಕೋಟಿಗೂ ಅಧಿಕ ಹಣ ವ್ಯಯಿ ಸಿದೆ.

2015 ರಿಂದ ಸರ್ಕಾರವು ತನ್ನ ಸಾಧನೆಗಳು, ಪ್ರಕಟಣೆಗಳು, ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಮತ್ತು ಯೋಜನೆಗಳ ಜಾಹೀರಾತುಗಳಿಗಾಗಿ ಪತ್ರಿಕೆ ಗಳು, ಬ್ಯಾನರ್‌ಗಳು, ಇಂಟರ್ನೆಟ್, ಟಿವಿ ಮತ್ತು ರೇಡಿಯೊ ಇತ್ಯಾದಿಗಳಿಗೆ ಪ್ರತಿವರ್ಷ ಖರ್ಚು ಮಾಡಿದ ಮೊತ್ತದ ಕುರಿತು ವಿವರ ನೀಡುವಂತೆ ಅಹ್ಮದ್ ಕೇಳಿದ್ದರು.

ಈ ಅವಧಿಯಲ್ಲಿ ಪತ್ರಿಕೆಗಳ ಜಾಹೀರಾತಿಗಾಗಿ ₹ 596 ಕೋಟಿ, ಟಿವಿ ಜಾಹೀರಾತುಗಳಿಗೆ ₹ 96.34 ಕೋಟಿ, ರೇಡಿಯೋಗೆ ₹ 21.76 ಕೋಟಿ, ಇಂಟರ್‌ನೆಟ್‌ಗೆ ₹ 1.19 ಕೋಟಿ ಮತ್ತು ಬ್ಯಾನರ್‌ಗಳಿಗೆ ₹ 4.39 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.