ಮುಂಬೈ: ಭಾರತದ ಷೇರುಪೇಟೆ ಸೋಮವಾರ ಆಟೋ, ಬ್ಯಾಂಕ್, ಮೆಟಲ್, ಪವರ್ ಮತ್ತು ರಿಯಾಲ್ಟಿ ಸ್ಟಾಕ್‌ಗಳ ಬೆಂಬಲದೊಂದಿಗೆ ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಚ್ಚಲ್ಪಟ್ಟವು.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ 76.72 ಪಾಯಿಂಟ್ಸ್ ಏರಿಕೆಗೊಂಡು 60,135.78 ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.80 ಪಾಯಿಂಟ್ಸ್ ಹೆಚ್ಚಾಗಿ 17,946.00 ಪಾಯಿಂಟ್ಸ್ ಮುಟ್ಟಿದೆ. ದಿನದ ವಹಿವಾಟು ಅಂತ್ಯದಲ್ಲಿ 1814 ಷೇರುಗಳು ಏರಿಕೆಗೊಂಡರೆ, 1375 ಷೇರುಗಳು ಕುಸಿದವು.
ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಮಾರುತಿ ಸುಜುಕಿ, ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಪವರ್ ಗ್ರಿಡ್ ಕಾರ್ಪ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ.
ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 92,710 ವಾಹನಗಳು ಮಾರಾಟಗೊಂಡಿದ್ದು, ಕಳೆದ ವರ್ಷ ಕ್ಯೂ 2 ರಲ್ಲಿ ಮಾರಾಟವಾದ 1,13,569 ವಾಹನಗಳಿಗಿಂತ ಶೇಕಡಾ 18.4ರಷ್ಟು ಕಡಿಮೆಯಾಗಿದೆ.
ಟಾಟಾ ಮೋಟಾರ್ಸ್ 52 ವಾರಗಳ ಗರಿಷ್ಠ ಮಟ್ಟವಾದ 420.75 ರೂ.ಗಳನ್ನು ಮುಟ್ಟಿತು ಮತ್ತು ಬಿಎಸ್‌ಇಯಲ್ಲಿ ರೂ. 32.65 ರೂಪಾಯಿ ಅಥವಾ ಶೇ. 8.53 ರಷ್ಟು ಏರಿಕೆಯಾಗಿ ರೂ 415.60 ಕ್ಕೆ ದಿನದ ವಹಿವಾಟು ಮುಗಿಸಿತು.