Thursday, 12th December 2024

ಮುಂಬೈನ ಷೇರು ಮಾರುಕಟ್ಟೆಯಲ್ಲಿ ತಲ್ಲಣ: 8 ಲಕ್ಷ ಕೋಟಿ ನಷ್ಟ

ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ಮುಂಬೈನ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ. ಕೇವಲ ಒಂದೇ ಗಂಟೆಯಲ್ಲಿ 8 ಲಕ್ಷ ಕೋಟಿಗೂ ಹೆಚ್ಚು ಕುಸಿತಗೊಂಡಿದೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಸ್ಥಿತಿ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಹೊಡೆತ ನೀಡಿದೆ. ಮಿತ್ರ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ಹೇರಿದ ಕಾರಣದಿಂದಾಗಿ ಆರ್ಥಿಕತೆಯ ಚೇತರಿಕೆಗೆ ಭಾರೀ ಹೊಡೆತ ನೀಡಿದೆ.

ಉಕ್ರೇನ್ ಬಿಕ್ಕಟ್ಟಿನಿಂದಾಗಿ ಮುಂಬೈ ಷೇರುಪೇಟೆಯಲ್ಲಿ ಬೆಳಿಗ್ಗೆ 2.48 ಕೋಟಿ ಕುಸಿತ ಕಂಡಿದೆ. ಬುಧವಾರ ಕೊನೆ ಗೊಂಡ ಮಾರುಕಟ್ಟೆ ಸಮಯದಲ್ಲಿ 2.55 ಕೋಟಿ ಇತ್ತು. ಬಳಿಕ ಉಕ್ರೇನ್-ರಷ್ಯಾ ಯುದ್ಧ ಭೀತಿಯಿಂದಾಗಿ ಕೇವಲ ಒಂದು ಗಂಟೆಯಲ್ಲಿ 8.2 ಲಕ್ಷ ಕೋಟಿ ರೂ ಗೆ ಕುಸಿತಗೊಂಡಿದೆ.

ಇನ್ನೂ ನಿಫ್ಟಿ ಶೇ.3ಕ್ಕಿಂತ ಹೆಚ್ಚು ಕುಸಿತಗೊಂಡಿದೆ. ಬಿಎಸ್‌ಇ ಸೆನ್ಸೆಕ್ಸ್ 1,718.99 ಕುಸಿತಗೊಂಡಿದೆ.