Friday, 13th December 2024

ಜೈಪುರದಲ್ಲಿ ಒಂಬತ್ತು ಓಮಿಕ್ರಾನ್‌ ಪ್ರಕರಣ ದೃಢ

ನವದೆಹಲಿ: ಮಹಾರಾಷ್ಟ್ರದಲ್ಲಿ ಏಳು ಮಂದಿಯಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡ ಬೆನ್ನಲ್ಲೇ ರಾಜಸ್ಥಾನದ ಜೈಪುರದಲ್ಲಿ ಒಟ್ಟು ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ.

ನವೆಂಬರ್‌ 28 ನಡೆದ ವಿವಾಹ ಸಮಾರಂಭದಲ್ಲಿ ಭಾಗಿಯಾದ ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಈ ಪೈಕಿ ನಾಲ್ವರು ನವೆಂಬರ್‌ 25 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ವಿವಾಹ ಸಮಾರಂಭದಲ್ಲಿ ಭಾಗಿ ಯಾಗಿದ್ದಾರೆ.

ಒಂಬತ್ತು ಮಂದಿಯ ಪೈಕಿ ನಾಲ್ವರು ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ದಿಂದ ಬಂದವರು. ನಾಲ್ವರನ್ನು ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯಗೆ ದಾಖಲು ಮಾಡಲಾಗಿದೆ. ಐದು ಮಂದಿ ಹೋಮ್‌ ಐಸೋಲೇಶನ್‌ನಲ್ಲಿ ಇದ್ದಾರೆ.

ಐವರನ್ನು ಕೂಡ ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಯು ತ್ತಿದೆ ಎಂದು ಜೈಪುರ ಸಿಎಂಎಚ್‌ಒ ನರೋತ್ತಮ್ ಶರ್ಮಾ ಮಾಹಿತಿ ನೀಡಿದರು.