Sunday, 24th November 2024

9,436 ಕೋವಿಡ್ ಪ್ರಕರಣ ದೃಢ

covid

ವದೆಹಲಿ: ದೇಶದಾದ್ಯಂತ ಭಾನುವಾರ ಕೊನೆಗೊಂಡ ಕಳೆದ 24 ಗಂಟೆ ಗಳಲ್ಲಿ ಹೊಸದಾಗಿ 9,436 ಕೋವಿಡ್ ಪ್ರಕರಣ ಗಳು ವರದಿಯಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ 10,000ಗಿಂತ ಕಡಿಮೆ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 86,591ಕ್ಕೆ ಇಳಿಕೆಯಾ ಗಿದೆ.

ದೇಶದಲ್ಲಿ ಈವರೆಗೆ 4,44,08,132 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 5,27,754 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಪೈಕಿ ಶೇ 0.19 ಸಕ್ರಿಯ ಪ್ರಕರಣಗಳಿವೆ. ಹಾಗೆಯೇ ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ 98.62 ಆಗಿದೆ.

ದೇಶದಲ್ಲಿ ಈವರೆಗೆ 88.50 ಕೋಟಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 211.66 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಿಸಲಾಗಿದೆ.