Thursday, 12th December 2024

Viral Video: ರಸ್ತೆ ಮಧ್ಯೆ ಕುರ್ಚಿ ಹಾಕಿ ಕುಳಿತ ಯುವಕನಿಗೆ ಟ್ರಕ್ ಡಿಕ್ಕಿ ; ಮುಂದೇನಾಯ್ತು ವಿಡಿಯೋ ನೋಡಿ

Viral Video

ಉತ್ತರಪ್ರದೇಶ: ಜನನಿಬಿಡ ರಸ್ತೆ ಮಧ್ಯೆ ವ್ಯಕ್ತಿಯೊಬ್ಬ ಕುರ್ಚಿ ಹಾಕಿಕೊಂಡು ಕುಳಿತಿದ್ದು, ಟ್ರಕ್ ಡಿಕ್ಕಿ (hit by truck) ಹೊಡೆದರೂ ಅದೃಷ್ಟವಶಾತ್ ವ್ಯಕ್ತಿ ಅಪಾಯದಿಂದ ಪಾರಾದ ಘಟನೆ ಉತ್ತರ ಪ್ರದೇಶದ (uttarpradesh) ಪ್ರತಾಪ್ ಗಢದಲ್ಲಿ (Pratapgarh) ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ವೈರಲ್ ಆಗಿರುವ ಈ ಕ್ಲಿಪ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಪ್ಪು ಶಾರ್ಟ್ಸ್‌ ಮಾತ್ರ ಧರಿಸಿ ವಾಹನಗಳು ಹಾದು ಹೋಗುತ್ತಿರುವ ರಸ್ತೆ ಮಧ್ಯೆಯೇ ಕುರ್ಚಿ ಇಟ್ಟು ಕುಳಿತಿದ್ದಾನೆ. ದಾರಿಹೋಕರು ಆತನಿಗೆ ಎಚ್ಚರಿಕೆ ನೀಡುತ್ತಿದ್ದರು. ಈ ನಡುವೆ ಟ್ರಕ್ ವೊಂದು ಬಂದಿದೆ. ಅಪಾಯದ ಅರಿವಿಲ್ಲದ ವ್ಯಕ್ತಿ ಜನರನ್ನು ನೋಡುತ್ತಿದ್ದಂತೆ ಹಿಂದಿನಿಂದ ಟ್ರಕ್ ಬಂದು ಗುದ್ದಿದ್ದು, ಆತ ಕುರ್ಚಿ ಸಮೇತ ನೆಲಕ್ಕೆ ಬಿದ್ದಿದ್ದಾನೆ.

ಅಪಘಾತ ನಡೆದರೂ ಆತ ಮಾತ್ರ ಅಪಾಯದಿಂದ ಪಾರಾಗಿದ್ದಾನೆ. ಸುತ್ತಲಿದ್ದ ಜನರು ಟ್ರಕ್ ಚಾಲಕನಿಗೆ ಹೋಗುವಂತೆ ತಿಳಿಸಿದರು. ಈ ಘಟನೆ ಒಂದು ಚಮತ್ಕಾರವೆಂದು ತಳ್ಳಿಹಾಕಿದರು.

ಎಕ್ಸ್ ನಲ್ಲಿ ಈ ವಿಡಿಯೋ ನೋಡಿರುವ ಕೆಲವರು ಸಹೋದರ ಇದು ನಿಜವಾಗಿಯೂ ಚೆನ್ನಾಗಿತ್ತುಎಂದು ಕಾಮೆಂಟ್ ಮಾಡಿದ್ದಾರೆ.

http://

पुलिस चौकी के सामने, सड़क के बीचो-बीच ठसक से बैठा मनबढ़

📍प्रतापगढ़, यूपी pic.twitter.com/uxDQLtu6WU
— Ranvijay Singh (@ranvijaylive) August 30, 2024

ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿರುವ ಸ್ಥಳೀಯ ಪೊಲೀಸರು ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಟ್ರಕ್ ಅನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಕೋತ್ವಾಲಿ ನಗರ ಪೊಲೀಸ್ ಠಾಣೆ ಪೊಲೀಸರು ಕೂಡಲೇ ತನಿಖೆ ಕೈಗೆತ್ತಿಕೊಂಡಿದ್ದು ಯುವಕನನ್ನು ಮಾನಸಿಕ ಅಸ್ವಸ್ಥನೆಂದು ಗುರುತಿಸಲಾಗಿದೆ ಎಂದು ಪ್ರತಾಪ್‌ಗಢ ಪೊಲೀಸರು ಎಕ್ಸ್‌ನಲ್ಲಿ ಹೇಳಿದ್ದಾರೆ.