Wednesday, 27th November 2024

Aadhaar Card Update: ಆಧಾರ್ ಕಾರ್ಡ್ ಉಚಿತ ಅಪ್‌ಡೇಟ್‌ಗೆ ಡಿ. 14 ಕೊನೆಯ ದಿನ

Aadhaar Card Update

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿರುವ ಆಧಾರ್ ಕಾರ್ಡ್‌ನಲ್ಲಿ (Aadhaar Card Update) ಹೆಸರು, ವಿಳಾಸ ಅಥವಾ ಜನ್ಮ ದಿನಾಂಕವನ್ನು ಉಚಿತವಾಗಿ ನವೀಕರಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಹೀಗಾಗಿ ಆಧಾರ್ ಅಪ್ಡೇಟ್ ಮಾಡಲು ಯೋಚಿಸುತ್ತಿದ್ದರೆ ಕೂಡಲೇ ಮಾಡಿಸಿಕೊಳ್ಳಿ. ಆಧಾರ್ ಅಪ್ಡೇಟ್ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ಮಾಡಬಹುದಾಗಿದೆ.

ಏಕೆ ನವೀಕರಿಸಬೇಕು?

ಯುಐಡಿಎಐ ಆಧಾರ್ ಮಾಹಿತಿಯನ್ನು ಅಪ್‌ಡೇಟ್ ಮಾಡಿ 10 ವರ್ಷಗಳಿಗಿಂತ ಹಳೆಯದಾಗಿದ್ದರೆ ಅದನ್ನು ನವೀಕರಿಸಲು ಶಿಫಾರಸು ಮಾಡುತ್ತದೆ. ವಿವರಗಳನ್ನು ನವೀಕರಣದಿಂದ ಸಾಕಷ್ಟು ಪ್ರಯೋಜನಗಳಿವೆ.

ಆಧಾರ್ ಮಾಹಿತಿಯು ಪ್ರಸ್ತುತವಾಗಿ ಇರಿಸುತ್ತದೆ. ಇದರಿಂದ ಸರ್ಕಾರಿ ಮತ್ತು ಖಾಸಗಿ ಸೇವೆ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆಧಾರ್ ಆಧಾರಿತ ಪರಿಶೀಲನೆ ಸುಲಭವಾಗುತ್ತದೆ.

ನವೀಕರಿಸುವುದು ಹೇಗೆ?

ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ಹಲವು ಹಂತಗಳಿವೆ.
ಯುಐಡಿಎಐ ವೆಬ್‌ಸೈಟ್‌ myaadhaar.uidai.gov.in ಗೆ ಭೇಟಿ ನೀಡಿ. ಇಲ್ಲಿ ನನ್ನ ಆಧಾರ್ ಅಡಿಯಲ್ಲಿ, ಆಧಾರ್ ಅನ್ನು ನವೀಕರಿಸಿ ಎಂಬುದನ್ನು ಆಯ್ಕೆ ಮಾಡಿ.

ಅಪ್‌ಡೇಟ್ ಪುಟದಲ್ಲಿ ಆಧಾರ್ ವಿವರಗಳನ್ನು ನವೀಕರಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ಡಾಕ್ಯುಮೆಂಟ್ ಅಪ್‌ಡೇಟ್ ಅನ್ನು ಆಯ್ಕೆ ಮಾಡಿ. ಬಳಿಕ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಒದಗಿಸಿ. ಒಟಿಪಿ ಕಳುಹಿಸಿ ಎಂಬುದನ್ನು ಕ್ಲಿಕ್ ಮಾಡಿ. ಒಟಿಪಿಯನ್ನು ಹಾಕಿ ನವೀಕರಿಸಲು ವಿವರಗಳನ್ನು ಆಯ್ಕೆ ಮಾಡಿ.

ಹೆಸರು ಅಥವಾ ವಿಳಾಸ ನವೀಕರಣ ವಿಭಾಗವನ್ನು ಆಯ್ಕೆ ಮಾಡಿ ನವೀಕರಿಸಿದ ವಿವರಗಳು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಬಳಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಟ್ರ್ಯಾಕಿಂಗ್‌ಗಾಗಿ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ಸಂಗ್ರಹಿಸಿಕೊಳ್ಳಿ.

ಬಯೋಮೆಟ್ರಿಕ್ ಸಂಬಂಧಿತ ಬದಲಾವಣೆ ಮಾಡುವುದಿದ್ದರೆ ಅದನ್ನು ಆಫ್ ಲೈನ್ ಮೂಲಕವೇ ಮಾಡಬೇಕು. ಇದರಲ್ಲಿ ಕಣ್ಣು, ಬೆರಳಚ್ಚು, ಮೊಬೈಲ್ ಸಂಖ್ಯೆ ಅಥವಾ ಛಾಯಾಚಿತ್ರ ಬದಲಾವಣೆ ಮಾಡಬಹುದು. ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಒಮ್ಮೆ ಮಾತ್ರ ನವೀಕರಿಸಲು ಸಾಧ್ಯ.

Aadhaar Card Update

ಆಫ್‌ಲೈನ್ ನವೀಕರಣ ಹೇಗೆ?

ಆಫ್‌ಲೈನ್ ನವೀಕರಣ ಮಾಡಲು ಯುಐಡಿಎಐ ವೆಬ್‌ಸೈಟ್‌ನಿಂದ ಅಥವಾ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ನೋಂದಣಿ, ಅಪ್‌ಡೇಟ್ ಫಾರ್ಮ್ ಪಡೆದು ಫಾರ್ಮ್ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಬಳಿಕ ಬಯೋಮೆಟ್ರಿಕ್ ಡೇಟಾವನ್ನು ನೀಡಿ. ಆಧಾರ್ ಅಪ್ಡೇಟ್ ಮಾಹಿತಿಯನ್ನು ಟ್ರ್ಯಾಕ್ ಮಾಡಲು ಯುಆರ್ ಎನ್ ನೊಂದಿಗೆ ಸ್ಲಿಪ್ ಅನ್ನು ಸ್ವೀಕರಿಸಿ.

Stock Market: ಸೆನ್ಸೆಕ್ಸ್‌ 50ಕ್ಕೆ ಜಿಯೊ, ಜೊಮ್ಯಾಟೊ ಸೇರ್ಪಡೆ

ಗಡುವು ವಿಸ್ತರಣೆ

ಆಧಾರ್ ಉಚಿತ ಅಪ್ಡೇಟ್ ಗಡುವನ್ನು ಮೊದಲಿಗೆ ಜೂನ್ 14ಕ್ಕೆ ನಿಗದಿಪಡಿಸಲಾಗಿತ್ತು. ಬಳಿಕ ಅದನ್ನು ಡಿಸೆಂಬರ್ 14ರವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕದ ಅನಂತರ ನವೀಕರಣಗಳಿಗೆ ಶುಲ್ಕ ವಿಧಿಸಲಾಗುತ್ತದೆ.