Sunday, 22nd December 2024

Abhijeet Bhattacharya : ಗಾಂಧಿಜೀ ಪಾಕಿಸ್ತಾನಕ್ಕೆ ರಾಷ್ಟ್ರಪಿತ, ಭಾರತಕ್ಕಲ್ಲ… ಮತ್ತೆ ತನ್ನ ನಾಲಿಗೆ ಹರಿಬಿಟ್ಟ ಗಾಯಕ

Abhijeet Bhattacharya

ಮುಂಬೈ: ಒಂದು ಕಾಲದ ಬಾಲಿವುಡ್‌ನ ಟಾಪ್‌ ಸಿಂಗರ್‌ (Bollywood Singer) ಎಂದೆನಿಸಿಕೊಂಡಿದ್ದ  ಅಭಿಜಿತ್ ಭಟ್ಟಾಚಾರ್ಯ (Abhijeet Bhattacharya) ಅವರು ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಶಾರುಖ್ ಖಾನ್ ಅವರ ಹಲವು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಇವರು ಕೆಲಸ ಮಾಡಿದ್ದರು. ಇದೀಗ ರಾಷ್ಟ್ರಪಿತ ಗಾಂಧೀಜಿಯವರ (Mahatma Gandhi) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಭಟ್ಟಾಚಾರ್ಯ ಅವರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖ್ಯಾತ ಯೂಟ್ಯೂಬರ್‌ ಹಾಗೂ ಪಾಡ್‌ಕಾಸ್ಟ್‌ ನಡೆಸಿಕೊಡುವ ಶುಭಂಕರ್ ಮಿಶ್ರಾ ಅವರ ಕಾರ್ಯಕ್ರಮಕ್ಕೆ ಶುಭಂಕರ್ ಮಿಶ್ರಾ ಅವರ ಆಗಮಿಸಿದ್ದರು. ಆಗ ಭಟ್ಟಾಚಾರ್ಯ ಮಹಾತ್ಮಾ ಗಾಂಧಿಯವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಸಂಗೀತ ಸಂಯೋಜಕ ಆರ್‌ಡಿ ಬರ್ಮನ್ ಮಹಾತ್ಮ ಗಾಂಧಿಗಿಂತ ದೊಡ್ಡವರು. ಮಹಾತ್ಮ ಗಾಂಧಿಯವರು ರಾಷ್ಟ್ರಪಿತರಾಗಿದ್ದಂತೆ, ಆದರೆ ಆರ್‌ಡಿ ಬರ್ಮನ್ ಸಂಗೀತ ಜಗತ್ತಿನಲ್ಲಿ ಪಿತಾಮಹ ಎಂದು ಹೇಳಿದರು.

ಇಷ್ಟಕ್ಕೇ ನಿಲ್ಲದೆ, ಗಾಯಕ ಗಾಂಧಿಜೀ ಮೇಲೆ ಹೆಚ್ಚು ಕಟುವಾದ ದಾಳಿಯನ್ನು ಪ್ರಾರಂಭಿಸಿದರು. ಅವರು ಗಾಂಧಿಜೀ ಅವರನ್ನು ಪಾಕಿಸ್ತಾನದ ರಾಷ್ಟ್ರಪಿತ ಎಂದು ಕರೆದರು. “ಮಹಾತ್ಮ ಗಾಂಧಿ ಅವರು ಪಾಕಿಸ್ತಾನಕ್ಕೆ ರಾಷ್ಟ್ರಪಿತರಾಗಿದ್ದರು, ಭಾರತಕ್ಕಲ್ಲ ಎಂದು ಹೇಳಿದ್ದಾರೆ. ಭಾರತ ಮೊದಲೇ ಅಸ್ತಿತ್ವದಲ್ಲಿತ್ತು. ನಂತರ ಭಾರತದಿಂದ ಪಾಕಿಸ್ತಾನವನ್ನು ಕೆತ್ತಲಾಯಿತು. ಗಾಂಧಿಯನ್ನು ಭಾರತಕ್ಕೆ ರಾಷ್ಟ್ರಪಿತ ಎಂದು ತಪ್ಪಾಗಿ ಕರೆಯಲಾಗಿದೆ. ಪಾಕಿಸ್ತಾನದ ಅಸ್ತಿತ್ವದ ಹಿಂದೆ ಅವರೇ ಕಾರಣ” ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಶಾರುಖ್‌ ಖಾನ್‌ ಅವರ ಬಗ್ಗೆ ಭಟ್ಟಾಚಾರ್ಯ ಮಾತನಾಡಿದ್ದು, ಬಾರಿ ಚರ್ಚೆಗೆ ಕಾರಣವಾಗಿತ್ತು. ಶಾರುಖ್‌ ಖಾನ್‌ಗೋಸ್ಕರ ನೀವೇಕೆ ಹಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತಿಸಿದ ಭಟ್ಟಾಚಾರ್ಯ ಆತ್ಮಗೌರವಕ್ಕೆ ಘಾಸಿಯಾದಾಗ ಎಲ್ಲವೂ ಸಾಕು ಎಂದೆನಿಸುತ್ತದೆ. ನಾನು ಬೇರೆ ಯಾರಿಗೋಸ್ಕರವೂ ಹಾಡುವುದಿಲ್ಲ. ನನಗಾಗಿ ನಾನು ಹಾಡುತ್ತೇನೆ. ಯಾರನ್ನೂ ಯಾರೂ ಕೀಳಾಗಿ ನೋಡುವ ಅವಶ್ಯಕತೆ ಇಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಯಾರೂ ಯಾರೊಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಅವರಿಗೂ ಈಗ 60 ವರ್ಷವಾಗಿದೆ ಮತ್ತು ನನಗೂ ಆಗಿದೆ. ಈಗ ಯಾರೊಬ್ಬರೂ ಬಂದು ಮಾತನಾಡಿ ಸಮಸ್ಯೆ ಸರಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿರುವುದಿಲ್ಲ ಎಂದು ಅವರು ಹೇಳಿದ್ದರು. ಶಾರುಖ್‌ಗಾಗಿ ಅಭಿಜೀತ್ ಕೊನೆಯ ಬಾರಿಗೆ ಹಾಡಿ 17 ವರ್ಷಗಳು ಕಳೆದಿವೆ.

ಅವರು ಮಿಥುನ್ ಚಕ್ರವರ್ತಿ, ವಿಜಯ್ ಆನಂದ್, ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸನ್ನಿ ಡಿಯೋಲ್, ಸಂಜಯ್ ದತ್, ಗೋವಿಂದ, ಅಕ್ಷಯ್ ಖನ್ನಾ, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಅಜಯ್ ದೇವಗನ್, ಹೃತಿಕ್ ರೋಷನ್, ಸೇರಿದಂತೆ ಹಲವು ಬಾಲಿವುಡ್ ನಟರಿಗೆ ಸಿನಿಮಾದಲ್ಲಿ ಹಾಡಿದ್ದಾರೆ.

ತುಮ್ನೆ ಜೋ ಮೈನೆ ದೇಖಾ, ತೌಬಾ ತುಮ್ಹಾರೆ ಇಶಾರೆ, ಮತ್ತು ಚಾಂದ್ ತಾರೆ ಸೇರಿದಂತೆ ಹಲವು ಹಿಟ್‌ ಸಾಂಗ್‌ಗಳನ್ನು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Baby John Taster Cut: ಬಾಲಿವುಡ್‌ನಲ್ಲೂ ಮೋಡಿ ಮಾಡಲು ಸೌತ್‌ ಬ್ಯೂಟಿ ಕೀರ್ತಿ ಸುರೇಶ್‌ ಸಜ್ಜು; ‘ಬೇಬಿ ಜಾನ್‌’ ಟೀಸರ್‌ ಔಟ್‌