ಚೆನ್ನೈ: ವೇಗವಾಗಿ ಬಂದ ಕಾರೊಂದು ಬೈಕ್ ಗೆ (Car and bike accident) ಡಿಕ್ಕಿಯಾಗಿ (Accident) ಪತ್ರಕರ್ತರೊಬ್ಬರು (Journalist death) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ (Chennai) ಎಲಿವೇಟೆಡ್ ಹೈವೇಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ತೆಲುಗು ಜನಪ್ರಿಯ ಸುದ್ದಿ ವಾಹಿನಿಯ (Telugu channel journalist) ಕೆಮರಾಮ್ಯಾನ್ ಪಾಂಡಿ ಬಜಾರ್ನ ಪ್ರದೀಪ್ ಕುಮಾರ್ ಮೃತರು.
ಚೆನ್ನೈನಲ್ಲಿ ಎಲಿವೇಟೆಡ್ ಹೈವೇಯಲ್ಲಿ ಪ್ರದೀಪ್ ಕುಮಾರ್ ಅವರು ತಮ್ಮ ಬೈಕ್ ನಲ್ಲಿ ಸಾಗುತ್ತಿದ್ದಾಗ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಪ್ರದೀಪ್ ಅವರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದಾನೆ.
ತೆಲುಗಿನ ಜನಪ್ರಿಯ ಸುದ್ದಿ ವಾಹಿನಿಯೊಂದರಲ್ಲಿ ಕೆಮರಾಮ್ಯಾನ್ ಆಗಿದ್ದ ಪ್ರದೀಪ್ ಅವರು ನಗರದಲ್ಲಿ ಅರೆಕಾಲಿಕ ರಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮಧುರವಾಯಲ್- ತಾಂಬರಂ ಎಲಿವೇಟೆಡ್ ಬೈಪಾಸ್ನಲ್ಲಿ ಬಿಎಂಡಬ್ಯೂ ಕಾರು ಪ್ರದೀಪ್ ಅವರ ಬೈಕ್ ಗೆ ಡಿಕ್ಕಿಯಾಗಿದೆ. ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರದೀಪ್ ಸಾವನ್ನಪ್ಪಿದ್ದಾರೆ.
ಅಪಘಾತದ ಅನಂತರ ಕಾರು ಚಾಲಕ ತನ್ನ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕಾರು ಚಾಲಕ ತನ್ನ ವಾಹನ ಬಿಟ್ಟು ಹೋಗಿರುವುದನ್ನು ಗಮನಿಸಿದ ಇತರ ಪ್ರಯಾಣಿಕರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಹಾನಿಗೊಳಗಾದ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಅಪಘಾತದ ಸ್ಥಳದಿಂದ 100 ಮೀಟರ್ ದೂರದಲ್ಲಿ ಪ್ರದೀಪ್ ಕುಮಾರ್ ಶವ ಪತ್ತೆಯಾದ ಅನಂತರವೇ ಅವರ ಸಾವು ದೃಢಪಟ್ಟಿದೆ. ನಾಪತ್ತೆಯಾಗಿರುವ ಕಾರು ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.