Sunday, 15th December 2024

ಟ್ರಕ್‍ಗೆ ಜೀಪ್ ಡಿಕ್ಕಿ: ಆರು ಮಂದಿ ಸಾವು

ಸಾತ್ನ: ಟ್ರಕ್‍ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಕುಟುಂಬದ ಆರು ಮಂದಿ ಸಾವನ್ನಪ್ಪಿ, ಐದು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.

ಸಾತ್ನಾ-ನಾಗೋಡ್ ರಸ್ತೆಯಲ್ಲಿ ಅಪಘಾತ ಸಂಭಸಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟು, ಒಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿ ದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಾತ್ನಾಜಿಲ್ಲೆಯ ಪನ್ನಾದಲ್ಲಿರುವ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಜೀಪ್ ಟ್ರಕ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಎಎಸ್‍ಪಿ ಶೈಲೆಂದ್ರಕುಮಾರ್ ತಿಳಿಸಿದ್ದಾರೆ.