Thursday, 12th December 2024

ನಿಲ್ಲಿಸಿದ್ದ ಬಸ್ ಗಳಿಗೆ ಟ್ರಕ್‌ ಢಿಕ್ಕಿ: 8 ಮಂದಿ ಸಾವು

ಭೋಪಾಲ್:‌ ನಿಲ್ಲಿಸಿದ್ದ ಬಸ್ ಗಳಿಗೆ ಟ್ರಕ್‌ ಢಿಕ್ಕಿ ಹೊಡೆದು 8 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ರೇವಾ-ಸತ್ನಾ ಗಡಿಯ ರಸ್ತೆಯಲ್ಲಿ ನಡೆದಿದೆ.

ಸತ್ನಾ ನಗರದಲ್ಲಿ ‘ಕೋಲ್ ಮಹಾಕುಂಭ’ದಲ್ಲಿ ಭಾಗಿಯಾಗಿ ಬರುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಹಾರಕ್ಕಾಗಿ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿದ್ದರು.

ಈ ವೇಳೆ‌ ರೇವಾ ಕಡೆಯಿಂದ ವೇಗವಾಗಿ ಬಂದ ಟ್ರಕ್ ರಸ್ತೆ ಬದಿ ನಿಲ್ಲಿಸಿದ್ದ ಮೂರು ಬಸ್‌ ಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಒಂದು ಬಸ್‌ ಕಂದಕಕ್ಕೆ ಉರುಳಿದ್ದು, 8 ಮಂದಿ ಮೃತ ಪಟ್ಟಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಬಸ್ ಗಳಿಗೆ ಹಿಂದಿನಿಂದ ಬಂದು ಟ್ರಕ್‌ ಢಿಕ್ಕಿ ಹೊಡೆದಿದೆ. ಟ್ರಕ್‌ ನ ಚಕ್ರಗಳು ಸಿಡಿದು ಹೋಗಿದ್ದರಿಂದ ಚಾಲಕ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

Read E-Paper click here