Thursday, 12th December 2024

ಕಾರಿಗೆ ಟ್ರಕ್ ಡಿಕ್ಕಿ: ಆರು ಮಂದಿಗೆ ಗಾಯ

ಇಟಾಹ್ (ಉತ್ತರ ಪ್ರದೇಶ): ಪಿಲುವಾ ಬೈಪಾಸ್‌ನಲ್ಲಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುವಾರ ಕಾರು ದೆಹಲಿಯಿಂದ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಈ ಅಪಘಾತದ ನಂತರ ಟ್ರಕ್ ಚಾಲಕ ವಾಹನದೊಂದಿಗೆ ಪರಾರಿ ಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಫೀಕ್ (68) ಮತ್ತು ಜಾವಿದ್ ಅಹ್ಮದ್ (71) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಲಾಗಿದ್ದು, ಮೃತದೇಹ ಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಟ್ರಕ್ ಚಾಲಕನನ್ನು ಶ್ರೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.