Monday, 16th September 2024

ಆಸಿಡ್‌ ದಾಳಿ ಪ್ರಕರಣ: ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ನೋಟಿಸ್

ವದೆಹಲಿ: ಬಾಲಕಿಯ ಮೇಲಿನ ಆಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇ-ಕಾಮರ್ಸ್ ವೇದಿಕೆಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗವು ಗುರುವಾರ ನೋಟಿಸ್ ನೀಡಿದೆ.

ಪಶ್ಚಿಮ ದೆಹಲಿಯ ಉತ್ತಮ್‌ ನಗರದ ಮೋಹನ್‌ ಗಾರ್ಡನ್‌ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿ ಗಳು ಬಾಲಕಿ ಮೇಲೆ ರಾಸಾಯನಿಕ ದ್ರವ ಎರಚಿ ಪರಾರಿಯಾಗಿ ದ್ದರು.

ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸು ತ್ತಿದ್ದಾರೆ. ಆರೋಪಿಗಳು ಆಸಿಡ್‌ ಮಾದರಿಯ ರಾಸಾಯನಿಕ ದ್ರವವನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ನೋಟಿಸ್ ನೀಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್ ವೇದಿಕೆಯಲ್ಲಿ ಆಸಿಡ್‌ ಮಾರಾಟ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಮಹಿಳಾ ಆಯೋಗವು ನೋಟಿಸ್‌ ಜಾರಿ ಮಾಡಿದೆ.

ಬಾಲಕಿಯೊಂದಿಗೆ ವೈಷಮ್ಯ ಹೊಂದಿದ್ದ ಸಚಿನ್ ಅರೋರಾ ದಾಳಿಯನ್ನು ಯೋಜಿಸಿದ್ದ. ಆತನಿಗೆ 19 ವರ್ಷದ ಹರ್ಷಿತ್ ಅಗರ್ವಾಲ್ ಮತ್ತು 22 ವರ್ಷದ ವೀರೇಂದ್ರ ಸಿಂಗ್ ಸಹಾಯ ಮಾಡಿದ್ದರು.