Friday, 10th January 2025

Actor Allu Arjun: ಮತ್ತೊಮ್ಮೆ ಬಾಕ್ಸ್‌ ಆಫೀಸ್‌ ಶೇಕ್‌ ಮಾಡಲು ಅಲ್ಲು ಅರ್ಜುನ್‌ ಸಜ್ಜು; ಸಂಜಯ್‌ ಲೀಲಾ ಬನ್ಸಾಲಿ ಚಿತ್ರಕ್ಕೆ ಆಯ್ಕೆ ?

Actor Allu Arjun

ಮುಂಬೈ: ಟಾಲಿವುಡ್‌ ಮಾಸ್‌ ಚಿತ್ರಗಳ ನಿರ್ದೇಶಕ ಸುಕುಮಾರ್‌ (Sukumar) ಮತ್ತು ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ (Actor Allu Arjun) ಕಾಂಬಿನೇಷನ್‌ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದೆ. 2021ರಲ್ಲಿ ತೆರೆಕಂಡ ‘ಪುಷ್ಪ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್‌ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಅತ್ಯುತ್ತಮ ನಟ ಅವಾರ್ಡ್‌ ತಂದುಕೊಟ್ಟು ಇತಿಹಾಸ ಬರೆದಿದ್ದರು. ಇತ್ತ ಇತ್ತೀಚೆಗೆ ರಿಲೀಸ್‌ ಆಗಿರುವ ಸೀಕ್ವೆಲ್‌ ʼಪುಷ್ಪ 2ʼ ಮೂಲಕ ದಾಖಲೆಯ ಕಲೆಕ್ಷನ್‌ ಮಾಡಿ ಹಲವು ರೆಕಾರ್ಡ್‌ ಬ್ರೇಕ್‌ ಮಾಡಿದ್ದಾರೆ. ಸದ್ಯ ಈ ಯಶಸ್ಸಿನ ಉತ್ತುಂಗದಲ್ಲಿರುವ ಅಲ್ಲು ಅರ್ಜುನ್‌ ಹೊಸದೊಂದು ಚಿತ್ರ ಒಪ್ಪಿಕೊಂಡು ಮತ್ತೊಂದು ಇತಿಹಾಸ ಬರೆಯಲು ಮುಂದಾಗಿದ್ದಾರೆ. ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ, ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿಸುವ ಸಂಜಯ್‌ ಲೀಲಾ ಬನ್ಸಾಲಿ (Sanjay Leela Bhansali) ಅವರನ್ನು ಅಲ್ಲು ಅರ್ಜುನ್‌ ಭೇಟಿಯಾಗಿದ್ದು, ಅವರ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಸದ್ಯ ಸಂಚಲನ ಸೃಷ್ಟಿಸಿದೆ. ಈ ಮೂಲಕ ಉತ್ತರದ ನಿರ್ದೇಶಕ ಮತ್ತು ದಕ್ಷಿಣದ ಸ್ಟಾರ್‌ ಒಂದಾಗುವ ಸಾಧ್ಯತೆ ಇದ್ದು, ಬಾಕ್ಸ್‌ ಆಫೀಸ್‌ ಶೇಕ್‌ ಆಗಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ಕಲಾ ಶ್ರೀಮಂತಿಕೆ ಮೂಲಕ ತೆರೆಮೇಲೆ ಮ್ಯಾಜಿಕ್‌ ಸೃಷ್ಟಿಸುವ, ಹೊಸದೊಂದು ಲೋಕ ತೆರೆದಿಡುವ ಸಂಜಯ್‌ ಲೀಲಾ ಬನ್ಸಾಲಿ ಅವರನ್ನು ಅವರ ಕಚೇರಿಯಲ್ಲಿ ಇತ್ತೀಚೆಗೆ ಅಲ್ಲು ಅರ್ಜುನ್‌ ಭೇಟಿಯಾಗಿದ್ದಾರೆ. ಈ ದೃಶ್ಯ ಪ್ರಸ್ತುತ ಸಿನಿರಂಗದಲ್ಲಿ ಹೊಸದೊಂದು ಸಾಧ್ಯತೆಯನ್ನು ತೆರೆದಿಟ್ಟಿದೆ.

Allu Arjun met Sanjay Leela Bhansali today 👀
byu/Glad-Ad5911 inBollyBlindsNGossip

ಯಾವ ಚಿತ್ರ?

ʼಪುಷ್ಪ 2ʼ ಚಿತ್ರದ ಅಭೂತಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್‌ ಸದ್ಯ ಬೇರೆ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಇತ್ತ ಸಂಜಯ್‌ ಲೀಲಾ ಬನ್ಸಾಲಿ ಲವ್‌ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್‌ನ ರಿಯಲ್‌ ಕಪಲ್‌ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮತ್ತೆ ತೆರೆಮೇಲೆ ಒಂದಾಗುತ್ತಿದೆ. ಜತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರ ಈಗಾಗಲೇ ನಿರೀಕ್ಷೆ ಮೂಡಿಸಿದೆ.

2026ರಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಲ್ಲು ಅರ್ಜುನ್‌ ಕಾಣಿಕೊಳ್ಳಲಿದ್ದಾರ ಅಥವಾ ಬೇರೆ ಚಿತ್ರದಲ್ಲಿ ನಟಿಸಲಿದ್ದಾರ ಎನ್ನುವುದು ಸ್ಪಷ್ಟವಾಗಿಲ್ಲ. ‘ಲವ್ ಆ್ಯಂಡ್ ವಾರ್’ ಚಿತ್ರದ ಅತೀ ಪಾತ್ರದಲ್ಲಿ ಅಲ್ಲು ಅರ್ಜುನ್‌ ನಟಿಸುತ್ತಾರೆ ಎನ್ನುವ ಮಾತೂ ಕೇಳಿ ಬಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಇವರು ಒಂದಾದರೆ ಬಾಕ್ಸ್‌ ಆಫೀಸ್‌ ಶೇಕ್‌ ಆಗೋದು ಗ್ಯಾರಂಟಿ ಎಂದು ಫ್ಯಾನ್ಸ್‌ ಮಾತನಾಡಿಕೊಳ್ಳಲು ಅರಂಭಿಸಿದ್ದಾರೆ. ಒಟ್ಟಿನಲ್ಲಿ ಕಾಂಬಿನೇಷನ್‌ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾದು ಕುಳಿತಿದ್ದು, ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಮನೆ ಮಾಡಿದೆ.

ಈ ಸುದ್ದಿಯನ್ನೂ ಓದಿ: Pushpa 2 The Rule Reloaded: ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್‌; ‘ಪುಷ್ಪ 2’ ಚಿತ್ರಕ್ಕೆ ಹೆಚ್ಚುವರಿ 20 ನಿಮಿಷ ಸೇರ್ಪಡೆ

Leave a Reply

Your email address will not be published. Required fields are marked *