Thursday, 12th December 2024

MeToo in Kerala : ಗುಂಪು ರತಿಕ್ರೀಡೆ ವೀಕ್ಷಿಸುವಂತೆ ಒತ್ತಾಯಿಸುತ್ತಿದ್ದರು; ನಟ ಬಾಲಚಂದ್ರ ಮೇಲೆ ನಟಿ ಮಿನು ಆರೋಪ

Minu Muneer

ತಿರುವನಂತಪುರಂ: 2007ರಲ್ಲಿ ಮಲಯಾಳಂ ನಟ ಬಾಲಚಂದ್ರ ಮೆನನ್ ಅವರು ತಮ್ಮ ಕೋಣೆಯಲ್ಲಿ ಗುಂಪಿನಲ್ಲಿ ನಡೆಸುವ ವೀಕ್ಷಿಸುವಂತೆ ಒತ್ತಾಯಿಸಿದ್ದರು ಎಂದು ಮಲಯಾಳಂ ನಟಿ ಮಿನು ಮುನೀರ್ ಆರೋಪಿಸಿದ್ದಾರೆ.ಈ ಮೂಲಕ ಕೇರಳ ಸಿನಿಮಾ ಕ್ಷೇತ್ರದಲ್ಲಿ ಉಂಟಾಗಿರುವ ಮೀಟೂ (MeToo in Kerala) ಪ್ರಕರಣಕ್ಕೆ ಮತ್ತಷ್ಟು ತಿರುವುಗಳು ದೊರೆಯುತ್ತಿವೆ.

ಕೋಣೆಯಲ್ಲಿ ಮೂವರು ಹುಡುಗಿಯರು ಮತ್ತು ಚಾಲಚಂದ್ರ ಇದ್ದರು. ಅವರು ರತಿ ಕ್ರೀಡೆಯಲ್ಲಿ ತೊಡಗಿದ್ದರು. ಇನ್ನು ಕೆಲವು ಹುಡುಗಿಯರು ನೋಡುತ್ತಿದ್ದರು. ಈ ವೇಳೆ ನಾನು ಕೋಣೆಯಿಂದ ಹೊರನಡೆಯಲು ಮುಂದಾದೆ. ಅವರು ನನ್ನನ್ನು ಕುಳಿತು ನೋಡಲೇಬೇಕು ಎಂದು ಒತ್ತಾಯಿಸಿದರು ಎಂದು ಮಿನ್ನು ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹಿಂದೆ, ನಟ ಜಯಸೂರ್ಯ ಮತ್ತು ಸಿಪಿಐ (ಎಂ) ಶಾಸಕ ಮುಖೇಶ್ ಸೇರಿದಂತೆ ಹಲವಾರು ಜನರು ದೈಹಿಕ ದೌರ್ಜನ್ಯ ಮಾಡಿದ್ದಾರೆ ಎಂಬುದಾಗಿ ಮಿನ್ನು ಆರೋಪಿಸಿದ್ದರು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಹಲವಾರು ಮಹಿಳಾ ನಟರು ಮತ್ತು ಕಾರ್ಮಿಕರು ಎದುರಿಸುತ್ತಿರುವ ಲೈಂಗಿಕ ಶೋಷಣೆಯ ಸಮಸ್ಯೆಗಳನ್ನು ಹೇಮಾ ಸಮಿತಿಯ ವರದಿಯು ಎತ್ತಿದ ನಂತರ ಅವರ ಆರೋಪಗಳು ಬಂದಿವೆ.

ಆಗಸ್ಟ್ 19 ರಂದು ಪರಕಟಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ, ಮಲಯಾಳಂ ಚಲನಚಿತ್ರೋದ್ಯಮವನ್ನು ಸುಮಾರು 10 ರಿಂದ 15 ಪುರುಷ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ನಿಯಂತ್ರಿಸುತ್ತಾರೆ. ಅವರು ಉದ್ಯಮದ ಮೇಲೆ ಪ್ರಾಬಲ್ಯ ಹೊಂದಿದ್ದಾರೆ ಎಂದು ಹೇಳಿತ್ತು.

ತನ್ನ ಹಿಂದಿನ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಬಗ್ಗೆ ಮಾತನಾಡಿದ ಮುನೀರ್ “ತನಿಖೆಯ ಬಗ್ಗೆ ನನಗೆ ತುಂಬಾ ತೃಪ್ತಿ ಇದೆ. ಅಷ್ಟೊಂದು ಪ್ರಭಾವ ಹೊಂದಿರುವ ಶಾಸಕರನ್ನು ಬಂಧಿಸುವುದು ಸುಲಭದ ಮಾತಲ್ಲ. ವರದಿ ಪ್ರಕಟವಾದಾಗ ನನಗೆ, ಅದು ಸಾಕ್ಷಿಪ್ರಜ್ಞೆಯಾಗಿತ್ತು. ದೂರುಗಳನ್ನು ಸ್ವೀಕರಿಸಿದ ನಂತರ ನಾವು ಪ್ರಕರಣಗಳನ್ನು ದಾಖಲಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು ಎಂದು ಮಿನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Mandolin Srinivas: ಸ್ಫೂರ್ತಿಪಥ ಅಂಕಣ: ಮ್ಯಾಂಡೊಲಿನ್ ಮೂಲಕ ಪೂರ್ವ ಮತ್ತು ಪಶ್ಚಿಮಗಳನ್ನು ಬೆಸೆದ ಯು. ಶ್ರೀನಿವಾಸ್!

“ನಾನು ಸಾಕಷ್ಟು ಕನಸುಗಳನ್ನು ಹೊಂದಿದ್ದೆ. ಆದರೆ ಉದ್ಯಮವು ನನಗೆ ದುಃಸ್ವಪ್ನವಾಗಿ ಪರಿಣಮಿಸಿತು. ಹೇಮಾ ಸಮಿತಿ ವರದಿ ಉದ್ಯಮವನ್ನು ಮಾತ್ರವಲ್ಲ, ನಮ್ಮ ಸಮಾಜವನ್ನು ಶುದ್ಧೀಕರಿಸುತ್ತದೆ” ಎಂದು ಅವರು ಹೇಳಿದರು. ಹಣದ ಮೂಲಕ ರಾಜಿ ಮಾಡಿಕೊಳ್ಳಲು ಬಯಸುವ ವ್ಯಕ್ತಿಗಳಿಂದ ತನಗೆ ಅನೇಕ ಫೋನ್ ಕರೆಗಳು ಬಂದಿವೆ ಎಂದು ಮುನೀರ್ ಹೇಳಿದ್ದಾರೆ.