ನವದೆಹಲಿ: ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರಿಗೆ ಸಮನ್ಸ್ ಜಾರಿಯಾಗಿದೆ. ಗರಂ ಧರಮ್ ಡಾಬಾ ಫ್ರ್ಯಾಂಚೈಸ್‌ಗೆ(Garam Dharam Dhaba franchise) ಸಂಬಂಧಿಸಿದಂತೆ ಉದ್ಯಮಿ ಸುಶೀಲ್ ಕುಮಾರ್ ದಾಖಲಿಸಿದ್ದ ದೂರಿನಾಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ (Judicial Magistrate) ನಟ ಧರ್ಮೇಂದ್ರ(Actor Dharmendra) ಅವರಿಗೆ ಸಮನ್ಸ್ ನೀಡಿದ್ದಾರೆ.
ಈ ಬಗ್ಗೆ ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿದ್ದು, ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನ ಖ್ಯಾತ ನಟ ಧರ್ಮೇಂದ್ರ ಹಾಗೂ ಮತ್ತಿಬ್ಬರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ. ಗರಂ ಧರಮ್ ಡಾಬಾ ಫ್ರ್ಯಾಂಚೈಸ್ ಗೆ ಸಂಬಂಧಿಸಿದಂತೆ ಉದ್ಯಮಿ ಸುಶೀಲ್ ಕುಮಾರ್ ದಾಖಲಿಸಿದ್ದ ದೂರಿನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಯಶ್ ದೀಪ್ ಚಹಲ್ ನಟ ಧರ್ಮೇಂದ್ರ ಅವರಿಗೆ ಸಮನ್ಸ್ ನೀಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಆರೋಪಿಗಳು ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ವಂಚನೆ ಮತ್ತು ಕ್ರಿಮಿನಲ್ ಸಂಚಿನ ಪ್ರಕರಣವೆಂದು ನ್ಯಾಯಾಧೀಶರು ಹೇಳಿದ್ದು, ಫೆಬ್ರವರಿ 20, 2025 ರಂದು ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ ಎಂದು ವಕೀಲ ಡಿ.ಡಿ. ಪಾಂಡ್ಯ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ NH-24/NH-9 ನಲ್ಲಿ ಗರಂ ಧರಮ್ ಡಾಬಾ ಪ್ರಾಂಚೈಸಿ ತೆರೆಯುವ ಪ್ರಸ್ತಾಪದೊಂದಿಗೆ ಏಪ್ರಿಲ್ 2018ರಲ್ಲಿ ಧರಂ ಸಿಂಗ್ ಡಿಯೋಲ್ (ಧರ್ಮೇಂದ್ರ) ಪರವಾಗಿ ಸಹ ಆರೋಪಿಗಳು ಸಂಪರ್ಕಿಸಿದ್ದರು. ಸೆಪ್ಟೆಂಬರ್ 2018ರಲ್ಲಿ ರೂ. 17.70 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿರುವುದಾಗಿ ಅವರು ಹೇಳಿದ್ದರು. ಆದರೆ, ನಂತರ ಆರೋಪಿಗಳು ಅವರೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಅಮಿತಾಬ್ ಮತ್ತು ಧರ್ಮೇಂದ್ರ ಮನೆ ಸ್ಫೋಟಿಸುವಂತೆ ಬೆದರಿಕೆ
ಕಳೆದ ವರ್ಷವಷ್ಟೇ ನಟ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಮನೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಕಿಡಿಗೇಡಿಗಳು ಹೆದರಿಸಿದ್ದರು. ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಮನೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯಿಂದ ನಾಗ್ಪುರ ಪೊಲೀಸ್ ನಿಯಂತ್ರಣಕ್ಕೆ ಅನಾಮಧೇಯ ಕರೆ ಬಂದಿತ್ತು.
ಮೂಲಗಳ ಪ್ರಕಾರ, ಮುಖೇಶ್ ಅಂಬಾನಿಯವರ ಅದ್ದೂರಿ ಮನೆಯಾದ ಆಂಟಿಲಿಯಾದಲ್ಲಿಯೂ ಸ್ಫೋಟ ಸಂಭವಿಸಲಿದೆ ಎಂದು ಕರೆ ಮಾಡಿದವರು ಹೇಳಿದ್ದರು. ಈ ಕರೆ ಮಾಡಿದ ಕೂಡಲೇ ನಾಗ್ಪುರ ಪೊಲೀಸ್ ಕಂಟ್ರೋಲ್ ರೂಂ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿತ್ತು. ಮುಂಬೈ ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು. ಮುಂಬೈ ಪೊಲೀಸರಿಗೆ ಇದು ಹುಸಿ ಕರೆಯೇ ಎಂದು ಸಹ ಹೇಳಲು ಸಾಧ್ಯವಾಗಿರಲಿಲ್ಲ.
ಈ ಸುದ್ದಿಯನ್ನೂ ಓದಿ:Bellary Hospital: ಬಾಣಂತಿಯರ ಸಾವು ಪ್ರಕರಣ; ಡ್ರಗ್ ಕಂಟ್ರೋಲರ್ ಸಸ್ಪೆಂಡ್, ಔಷಧ ಕಂಪನಿ ಕಪ್ಪು ಪಟ್ಟಿಗೆ ಸೇರಿಸಲು ಸಿಎಂ ಆದೇಶ