Sunday, 15th December 2024

ಸೇನೆಗೆ ನೇಮಕಾತಿ ’ಅಗ್ನಿಪಥ್’ಗೆ ಗ್ರೀನ್ ಸಿಗ್ನಲ್

ನವದೆಹಲಿ: ಯುವಕರಿಗೆ ಸೇನೆ ಸೇರಲು ಅವಕಾಶ ನೀಡುವ ನಿಟ್ಟಿನಲ್ಲಿ, ಮಂಗಳವಾರ ಅಗ್ನಿಪಥ್ ಎನ್ನುವ ಹೊಸ ನೇಮಕಾತಿಗೆ, ಸಂಪುಟ ಸಮಿತಿಯು ಗ್ರೀನ್ ಸಿಗ್ನಲ್ ನೀಡಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದು, ಸೇನೆಯ ಹೊಸ ನೇಮ ಕಾತಿ ಮಾದರಿ ‘ಅಗ್ನಿಪಥ್’ಗೆ ಸಂಪುಟ ಸಮಿತಿ ಅನುಮೋದಿಸಿದೆ ಎಂದರು.

‘ಅಗ್ನಿಪಥ್’ ನ ಪರಿವರ್ತನಾ ಯೋಜನೆಯನ್ನು ಅನುಮೋದಿಸಲು ಭದ್ರತೆಗೆ ಸಂಬಂಧಿ ಸಿದ ಸಂಪುಟ ಸಮಿತಿಯು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇದರ ಅಡಿಯಲ್ಲಿ, ಭಾರತೀಯ ಯುವಕರಿಗೆ ಸಶಸ್ತ್ರ ಸೇವೆಗಳಿಗೆ ಸೇರ್ಪಡೆಗೊಳ್ಳಲು ಅವಕಾಶ ನೀಡಲಾ ಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಹೊಸ ಸೇನಾ ನೇಮಕಾತಿ ಅಗ್ನಿಪಥ್ ಅನುಸಾರ, ಭಾರತೀಯ ಸೇನೆಯಲ್ಲಿ ಅಲ್ಪಾವಧಿಯ ವರೆಗೆ ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ನೀಡಲಾ ಗಿದೆ.