ನವದೆಹಲಿ: ಕರೋನಾ ಲಸಿಕೆ ಬಗೆಗಿನ ಎಲ್ಲಾ ವದಂತಿಗಳು ಮತ್ತು ಗೊಂದಲಗಳನ್ನು ಹೋಗಲಾಡಿಸಲು ದೆಹಲಿಯ ಏಮ್ಸ್ ನ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಕರೋನಾ ಲಸಿಕೆಯ ಡೋಸ್ ಅನ್ನು ತೆಗೆದುಕೊಂಡರು.
ಕರೋನಾ ವಿರುದ್ಧ ಲಸಿಕೆ ಯನ್ನು ದೇಶಾದ್ಯಂತ ಇಂದಿನಿಂದ ಆರಂಭಿಸಲಾಗಿದೆ. ದೇಶದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಮೊದಲಿಗೆ, ದೆಹಲಿ ಏಮ್ಸ್ ನಲ್ಲಿರುವ ಸಫಾಯಿ ಕರ್ಮಚಾರಿ, ಉದ್ಯೋಗಿಯೊಬ್ಬರು ಕರೋನಾಗೆ ಮೊದಲು ಲಸಿಕೆಯನ್ನು ಪಡೆದುಕೊಂಡರು. ಬಳಿಕ ಏಮ್ಸ್ ನ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಲಸಿಕೆ ಯ ಡೋಸ್ ಅನ್ನು ಸಹ ತೆಗೆದುಕೊಂಡರು ಡಾ.ಗುಲೇರಿಯಾ ದೇಶದ ಅತ್ಯುನ್ನತ ವೈದ್ಯಕೀಯ ತಜ್ಞನಾಗಿದ್ದು, ಅವರೇ ಸ್ವತಃ ಕರೋನ ಲಸಿಕೆಯನ್ನು ತೆಗೆದುಕೊಂಢು ಲಸಿಕೆಯ ಬಗ್ಗೆ ಎಲ್ಲ ಆತಂಕಗಳು ಆಧಾರರಹಿತ ಎಂದು ಡಾ. ಗುಲೇರಿಯಾ ರುಜುವಾತು ಪಡಿಸಿದ್ದಾರೆ.