Thursday, 19th September 2024

Pralhad Joshi: ಪಿಎಂ ಸೂರ್ಯ ಘರ್ ಯೋಜನೆಯಡಿ ದೇಶಾದ್ಯಂತ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಗುರಿ: ಜೋಶಿ

Pralhad Joshi

ನವದೆಹಲಿ: ಪಿಎಂ ಸೂರ್ಯ ಘರ್ ಜಾಗತಿಕವಾಗಿ ಬಹು ದೊಡ್ಡ ಯೋಜನೆಯಾಗಿದೆ ಎಂದು ಕೇಂದ್ರ ಹೊಸ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಗುಜರಾತ್ ಗಾಂಧಿನಗರಕ್ಕೆ ಇಂದು ಭೇಟಿ ನೀಡಿ ಸೆ.16ರಿಂದ ಆಯೋಜಿಸಿರುವ ಜಾಗತಿಕ ಮರು ಹೂಡಿಕೆ ಸಮಾವೇಶದ ಸಿದ್ಧತೆ ವೀಕ್ಷಿಸಿ ಮಾತನಾಡಿದರು.

ಇದೇ ವೇಳೆ ಪಿಎಂ ಸೂರ್ಯ ಘರ್ ಯೋಜನೆ ಫಲಾನುಭವಿಯೊಬ್ಬರ ಮನೆಗೆ ತೆರಳಿ ಈ ಮೇಲ್ಚಾವಣಿ ವಿದ್ಯುತ್ ಉತ್ಪಾದನೆ ಘಟಕದ ಪ್ರಯೋಜನ ತಿಳಿದು ಸಂತಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | 7th Pay Commission: ಅನುದಾನಿತ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ; ವೇತನ ಹೆಚ್ಚಳಕ್ಕೆ ಸರ್ಕಾರ ಆದೇಶ

10 ಮಿಲಿಯನ್ ಜನರಿಗೆ ಉಚಿತ ವಿದ್ಯುತ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸೂರ್ಯ ಘರ್ ಯೋಜನೆಯಡಿ ದೇಶಾದ್ಯಂತ 10 ಮಿಲಿಯನ್ (1 ಕೋಟಿ) ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದ್ದಾಗಿ ತಿಳಿಸಿದರು.

ಗುಜರಾತ್ ಅಲ್ಲಿ 1.68 ಲಕ್ಷ ಘಟಕ

ಗುಜರಾತ್ ಅಲ್ಲಿ 1.68 ಲಕ್ಷಕ್ಕೂ ಹೆಚ್ಚು ಮನೆಗಳು ಮೇಲ್ಛಾವಣಿ ಸೌರ ಘಟಕ ಅಳವಡಿಸಿಕೊಂಡು ಪಿಎಂ ಸೂರ್ಯ ಘರ್ ಯೋಜನೆ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ತೋರಿದೆ ಎಂದು ಹೇಳಿದರು.

PM ಕುಸುಮ್ ಯೋಜನೆ ಕೂಡ ಗಮನಾರ್ಹ ಪ್ರಗತಿ ಕಂಡಿದೆ, ಗುಜರಾತ್ ರಾಜ್ಯದಲ್ಲಿ ಈಗಾಗಲೇ ಸೌರ ನೀರಿನ ಪಂಪ್‌ಗಳನ್ನು ಕೂಡ ಸ್ಥಾಪಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Vikasa Parva movie: ರೋಹಿತ್ ನಾಗೇಶ್ ಅಭಿನಯದ ಸಾಮಾಜಿಕ ಕಳಕಳಿಯ ʼವಿಕಾಸ ಪರ್ವʼ ಚಿತ್ರ ಸೆ.13ಕ್ಕೆ ರಿಲೀಸ್‌

ಸೂರ್ಯ ಘರ್ ಮತ್ತು ಪಿಎಂ ಕುಸುಮ ಯೋಜನೆ ಕುರಿತಂತೆ ಗುಜರಾತ್‌ನ ಹಣಕಾಸು, ಇಂಧನ ಮತ್ತು ಪೆಟ್ರೋಕೆಮಿಕಲ್ಸ್ ಸಚಿವ ಕನು ದೇಸಾಯಿ ಮತ್ತು MNRE India ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕ್ಷಮತೆ ಪರಿಶೀಲಿಸಿದರು.