Saturday, 23rd November 2024

AIMIM leader Controversy: ಹಿಂದೂ ವ್ಯಾಪಾರಿಗಳನ್ನುಬಹಿಷ್ಕರಿಸಲು ಕರೆ ನೀಡಿ ವಿವಾದ ಸೃಷ್ಟಿಸಿದ ಎಐಎಂಐಎಂ ನಾಯಕ

AIMIM leader Controversy

ಹಿಮಾಚಲ ಪ್ರದೇಶದ (Himachal pradesh) ಸೇಬುಗಳನ್ನು ಮುಸ್ಲಿಂ ವ್ಯಾಪಾರಿಗಳು (Muslim businessmen) ಬಹಿಷ್ಕರಿಸಬೇಕು ಎಂದು ಎಐಎಂಐಎಂ ನಾಯಕ (AIMIM leader Controversy) ಶೋಯೆಬ್ ಜಮೈ(Shoaib Jamai) ಕರೆ ಕೊಟ್ಟು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ. ಮುಸ್ಲಿಮರು ಹಿಂದೂ ಸಮುದಾಯವನ್ನು (Hindu community) ಆರ್ಥಿಕವಾಗಿ ಬಹಿಷ್ಕರಿಸುವಂತೆ ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶೋಯೆಬ್ ಜಮೈ, ಸಾಕು ಸಾಕು.. ಈಗ ನಾವು ಆರ್ಥಿಕ ಬಹಿಷ್ಕಾರವನ್ನು ಪ್ರಾರಂಭಿಸಬೇಕು. ಹಿಮಾಚಲ ಸೇಬುಗಳನ್ನು ಬಹಿಷ್ಕರಿಸಲು ನಾನು ಸುಮಾರು ಶೇ. 80ರಷ್ಟು ಮುಸ್ಲಿಂ ವ್ಯಾಪಾರಿಗಳಿಗೆ ದೇವರ ಸಲುವಾಗಿ ಮನವಿ ಮಾಡುತ್ತೇನೆ. ಈ ದ್ವೇಷದ ಮಾರುಕಟ್ಟೆಯಿಂದ ಏನನ್ನೂ ಖರೀದಿಸಬೇಡಿ ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ರೈತರು ಬೆಳೆಯುವ ಬಹುಪಾಲು ಸೇಬು ಉತ್ಪನ್ನಗಳನ್ನು ಮಂಡಿಯ ಸಗಟು ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರು ಹಿಂದೂಗಳು ಎಂದು ಅವರು ಹೇಳಿಕೆ ನೀಡಿದ್ದಾರೆ. ಮಾತುಗಳನ್ನು ಮುಂದುವರಿಸಿರುವ ಅವರು, ಚಳಿಗಾಲದಲ್ಲಿ ಹಿಮಾಚಲ ಪ್ರದೇಶದಿಂದ ನಾನು ಏನನ್ನೂ ಖರೀದಿಸುವುದಿಲ್ಲ ಎಂದು ಹೇಳಿದರು.

ನಾವು ಇಡೀ ವ್ಯವಸ್ಥೆಯನ್ನು ಮಣಿಸಲು ಮುಂದೆ ಬರಬೇಕಾಗಿದೆ ಎಂದು ಹೇಳಿರುವ ಶೋಯೆಬ್, ಅವರ ಹೇಳಿಕೆ ಸೋಶಿಯಲ್‌ ಮೀಡಿಯಾಗಳಲ್ಲಿ ವಿವಾದಕ್ಕೆ ಕಾರಣವಾಯಿತು. ಹೀಗಾಗಿ ಅವರು ಮಾತು ಬದಲಾಯಿಸಿದ್ದಾರೆ. ಯಾವುದೇ ಸಮುದಾಯದ ಬಗ್ಗೆ ನನಗೆ ಖಂಡಿತಾ ದ್ವೇಷವಿಲ್ಲ. ನಾನು ಯಾವಾಗಲೂ ಸಮಾಜದ ಜಾತ್ಯತೀತ ರಚನೆ ಮೇಲೆ ನಂಬಿಕೆ ಇಟ್ಟಿದ್ದೇನೆ. ಇಡೀ ಭಾರತ ಒಂದೇ. ಎಲ್ಲರನ್ನೂ ಪ್ರೀತಿಸಿ ಎಂದು ಹೇಳಿಕೆ ನೀಡಿ ನುಣುಚಿಕೊಳ್ಳುವುದಕ್ಕೆ ಯತ್ನಿಸಿದ್ದಾರೆ.

ತಮ್ಮ ಹಳೆಯ ಟ್ವೀಟ್ ಡಿಲೀಟ್ ಮಾಡಿ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.  
ನಾನು ಅಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಭೇಟಿಯಾದೆ. ಅವರ ನೋವನ್ನು ಅರ್ಥ ಮಾಡಿಕೊಳ್ಳಿ. ಅವರ ಧ್ವನಿಯನ್ನು ಪ್ರತಿಧ್ವನಿಸಲು ಬಯಸಿದ್ದೆ. ಆದರೆ ಯಾರೂ ಅವರ ಮಾತನ್ನು ಕೇಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಶೋಯೆಬ್ ಜಮೈ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ವಿಜ್ಞಾನಿ ಆನಂದ್ ರಂಗನಾಥನ್ ವಿರುದ್ಧ ಹೇಳಿಕೆ ನೀಡಿದ್ದರು.

Baba Siddique:`ಸಿದ್ದಿಕಿ ಹತ್ಯೆ ಮಾಡಿದ್ದು ನಾವೇ, ಕಾರಣ ಏನಪ್ಪ ಅಂದ್ರೆ..ʼ ಹೊಣೆ ಹೊತ್ತುಕೊಂಡ ಬಿಷ್ಣೋಯ್‌ ಗ್ಯಾಂಗ್‌

ವಿವಾದಿತ ಸಂಜೌಲಿ ಮಸೀದಿಯ ಕುರಿತು ಹೇಳಿಕೆ ನೀಡಿ ಧಾರ್ಮಿಕ ಉದ್ವಿಗ್ನತೆ ಉಂಟು ಮಾಡುತ್ತಿರುವ ಶೋಯೆಬ್ ಜಮೈಯನ್ನು ಬಂಧಿಸಬೇಕೆಂದು ಸೆಪ್ಟೆಂಬರ್‌ನಲ್ಲಿ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಒತ್ತಾಯಿಸಿದ್ದರು.