Sunday, 15th December 2024

ಫೆ.2ರಿಂದ ಬೆಳಗಾವಿ-ಚೆನ್ನೈ ವಿಮಾನ ಸೇವೆ ಆರಂಭ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಿಂದ ಚೆನ್ನೈಗೆ ನೇರ ವಿಮಾನ ಕಾರ್ಯಾಚರಣೆ ಫೆ.2ರಿಂದ ಆರಂಭಗೊಳ್ಳಲಿದೆ.

ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ. ಪ್ರತಿ ವಾರದ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರ್ಯಾಚರಿಸಲಿದೆ. ಬೆಳಿಗ್ಗೆ 10.55ಕ್ಕೆ ವಿಮಾನ ಚೆನ್ನೈಗೆ ತೆರಳಲಿದೆ’ ಎಂದು ವಿಮಾನನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ತಿಳಿಸಿದರು.

ಈ ಹಿಂದೆ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. 2018ರಲ್ಲಿ ಸ್ಥಗಿತಗೊಂಡಿತ್ತು.

ಪ್ರಸ್ತುತ, ಬೆಳಗಾವಿಯಿಂದ ಮೈಸೂರು ಮಾರ್ಗವಾಗಿ ಒಂದು ವಿಮಾನವಿದೆ. ಮುಂದಿನ ತಿಂಗಳಿಂದ ನೇರ ವಿಮಾನ ಆರಂಭ ಗೊಳ್ಳಲಿರುವುದರಿಂದ ಇಲ್ಲಿಂದ ಚೆನ್ನೈಗೆ ಕಾರ್ಯಾಚರಿಸುವ ವಿಮಾನಗಳ ಸಂಖ್ಯೆ 2ಕ್ಕೆ ಏರಲಿದೆ.