Wednesday, 8th January 2025

Ajit Pawar :’ನನಗೆ ಮತ ಹಾಕಿದ್ದೀರಿ… ಆದರೆ ನೀವು ನನ್ನ ಬಾಸ್ ಅಲ್ಲ’- NCP ಕಾರ್ಯಕರ್ತರ ಮೇಲೆ ಗರಂ ಆದ ಅಜಿತ್ ಪವಾರ್

Ajit Pawar

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ (Maharashtra DCM) ಅಜಿತ್ ಪವಾರ್ (Ajit Pawar) ಅವರು ಬಾರಾಮತಿಗೆ (Baramati) ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಗರಂ ಆಗಿರುವ ಘಟನೆ ವರದಿಯಾಗಿದೆ. ಸದ್ಯ ಇದು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಮೇದಾದ್ ಗ್ರಾಮದಲ್ಲಿ ಪೆಟ್ರೋಲ್ ಪಂಪ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಪವಾರ್ ಭಾಷಣ ಮಾಡುತ್ತಿದ್ದರು. ಆದರೆ ಕಾರ್ಯಕರ್ತರು ಭಾಷಣದ ಮಧ್ಯದಲ್ಲಿ ಜ್ಞಾಪಕ ಪತ್ರಗಳನ್ನು ನೀಡಲು ಪ್ರಯತ್ನಿಸಿದಾಗ ಪವಾರ್ ಸಿಟ್ಟಿಗೆದ್ದರು. ಸಿಟ್ಟಿನಿಂದ ಏರು ಧ್ವನಿಯಲ್ಲಿ ನೀವು ನನಗೆ ಮತ ಹಾಕಿದ್ದೀರಿ, ಆದರೆ ನೀವು ನನ್ನ ಬಾಸ್ ಆಗಿದ್ದೀರಿ ಎಂದರ್ಥವಲ್ಲ” ಎಂದು ಪವಾರ್ ಹೇಳಿದ್ದಾರೆ.

ಆದಾಗ್ಯೂ, ಪವಾರ್ ಅವರು ಕಾರ್ಮಿಕರೊಂದಿಗೆ ತೊಡಗಿಸಿಕೊಂಡಿಸಿದ್ದಾರೆ. ಅವರ ಕುಂದುಕೊರತೆಗಳನ್ನು ಆಲಿಸಿದ್ದಾರೆ. ನಂತರ ಕ್ಯಾಬಿನೇಟ್‌ ಸಚಿವ ಹಸನ್ ಮುಶ್ರಿಫ್ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ.

ಬಾರಾಮತಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಪವಾರ್ ಅವರು ತಮ್ಮ ಸೋದರಳಿಯ ಮತ್ತು ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಯುಗೇಂದ್ರ ಪವಾರ್ ಅವರನ್ನು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ  ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಕನಿಷ್ಠ 8 ಸಂಸದರು ಅಜಿತ್ ಪವಾರ್ ಅವರ ಎನ್‌ಸಿಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಸಂಸದರು ಅಜಿತ್ ಪವಾರ್ ಬಣದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸದ್ಯದಲ್ಲಿಯೇ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ : Maharashtra: ʻಮಹಾರಾಷ್ಟ್ರಕ್ಕೆ ಬಿಜೆಪಿಯಿಂದಲೇ ನೂತನ ಮುಖ್ಯಮಂತ್ರಿʼ-ಅಜಿತ್‌ ಪವಾರ್‌!

Leave a Reply

Your email address will not be published. Required fields are marked *