ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಎ.ಕೆ. ಆಂಟನಿ ಹಾಗೂ ಅವರ ಪತ್ನಿ ಎಲಿಜಬೆತ್ ಆಂಟನಿ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ಆಯಂಟನಿ ಅವರ ಪುತ್ರ ಅನಿಲ್ ಆಯಂಟನಿ ಅವರು ಟ್ವೀಟ್ ಮಾಡಿದ್ದು, ತಂದೆ ಎಕೆ ಆಯಂಟನಿ ಹಾಗೂ ತಾಯಿ ಎಲಿಜಬೆತ್ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಇಬ್ಬರೂ ದೆಹಲಿಯ ಏಮ್ಸ್ ಆಸ್ಪತ್ರೆದೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಅಹಮ್ಮದ್ ಪಟೇಲ್ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.