Sunday, 15th December 2024

ಅಲಿಗಢವನ್ನು ’ಹರಿಗಢ’ ಎಂದು ಮರುನಾಮಕರಣಕ್ಕೆ ಅನುಮೋದನೆ, ಸರಕಾರಕ್ಕೆ ಪ್ರಸ್ತಾವನೆ

ನವದೆಹಲಿ: ಉತ್ತರ ಪ್ರದೇಶದ ಅಲಿಗಢವನ್ನು ಹರಿಗಢ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅನುಮೋದಿಸಿದೆ ಎಂದು ವರದಿಯಾಗಿದೆ. ಸರಕಾರಕ್ಕೆ ಈ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.

ಅಲಿಗಡದ ಮರುನಾಮಕರಣದ ಕ್ರಮವನ್ನು ಉತ್ತರಪ್ರದೇಶ ಸರಕಾರವು ಅನುಮತಿಸಿದರೆ, ಇದು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮರುನಾಮಕರಣಗೊಂಡ ಸ್ಥಳಗಳ ಒಂದು ದೊಡ್ಡ ಪಟ್ಟಿಯನ್ನು ಸೇರುತ್ತದೆ. 2019 ರ ಜನವರಿಯಲ್ಲಿ ಕುಂಭ ಮೇಳಕ್ಕಿಂತ ಮೊದಲು ಅಲಹಾಬಾದ್‌ ನಗರವನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು.

ಸಭೆಯಲ್ಲಿ ಕೆಲವು ಪ್ರಸ್ತಾಪಗಳನ್ನು ಅಂಗೀಕರಿಸಲಾಯಿತು. ಅಲಿಗಡವನ್ನು ಹರಿಗಡ್ ಎಂದು ಮರುನಾಮಕರಣ ಮಾಡುವುದು ಮೊದಲ ಪ್ರಸ್ತಾವನೆ ಆಗಿತ್ತು.