ಹೈದರಾಬಾದ್: ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ (Hyderabad stampede) ಸಂಭವಿಸಿ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ (Allu Arjun) ಮೇಲೆ ಪ್ರಕರಣ ದಾಖಲಾಗಿದ್ದು, ಇದೀಗ ಅವರು ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಇದೀಗ ಮತ್ತೆ ಹೈದರಾಬಾದ್ ಪೊಲೀಸರು ಸ್ಟಾರ್ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅಲ್ಲು ಅರ್ಜುನ್ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ, ಅಲ್ಲು ಅರ್ಜುನ್ ತಮ್ಮ ತಂದೆ ಅಲ್ಲು ಅರವಿಂದ್ ಹಾಗೂ ವಕೀಲರ ಜೊತೆ ಪೊಲೀಸ್ ಠಾಣೆಗೆ ಬಂದಿದ್ದು, ಸತತ 4 ಗಂಟೆಗಳ ಗಂಟೆಗಳ ವಿಚಾರಣೆಯನ್ನು ಎದುರಿಸಿದ್ದಾರೆ.
ಇದೀಗ ನಟನ ವಿಚಾರಣೆ ಮುಗಿದಿದ್ದು, ವಿಚಾರಣೆಯ ವೇಳೆಯಲ್ಲಿ ಪೊಲೀಸರು ನಟನಿಗೆ ಥಿಯೇಟರ್ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದ್ದಾರೆ. ಅದರಲ್ಲಿ ಭದ್ರತಾ ಸಿಬ್ಬಂದಿ ಜನರನ್ನು ಸರಿಯಾದ ರೀತಿಯಲ್ಲಿ ಆವರಣಕ್ಕೆ ಪ್ರವೇಶಿಸದಂತೆ ನಿರ್ದೇಶಿಸಲು ಪ್ರಯತ್ನಿಸುತ್ತಿದ್ದರೂ ಭಾರಿ ಜನಸಮೂಹವು ಥಿಯೇಟರ್ನೊಳಗೆ ನುಗ್ಗುತ್ತಿರುವುದನ್ನು ತೋರಿಸುತ್ತದೆ. ಪೊಲೀಸ್ ಹೇಳಿಕೆಗಳ ಪ್ರಕಾರ ಪೊಲೀಸರು ಮಹಿಳೆ ಮೃತಪಟ್ಟಿರುವುದು ಹಾಗೂ ಜನಸಂದಣಿಯ ಬಗ್ಗೆ ತಿಳಿಸಿದ್ದರು ಕೂಡ ಅವರು ಥಿಯೇಟರ್ನಿಂದ ತೆರಳಲಿಲ್ಲ ಎಂದು ಹೇಳಿದ್ದರು. ಮೂಲಗಳ ಪ್ರಕಾರ 20ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಹೇಳಲಾಗುತ್ತಿದೆ. ಮಧ್ಯಂತರ ಜಾಮೀನಿನ ಬಳಿಕ ನಡೆಸಿದ ಸುದ್ದಿಗೋಷ್ಟಿ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ವಿಚಾರಣೆಯ ಬಳಿಕ ಘಟನೆಯ ಬಗ್ಗೆ ನಟನಿಂದ ಹೇಳಿಕೆ ಪಡೆಯಲಾಗಿದೆ.
Pushpa-2 Stampede Row#WATCH CCTV footage of the Sandhya theatre stampede. #AlluArjun #SandhyaTheatreIncident #Puspa2 pic.twitter.com/bonnuGEuiy
— Sanjay Jha (@JhaSanjay07) December 24, 2024
ಸಂಧ್ಯಾ ಥಿಯೇಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ವಿಚಾರಣೆಗೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸ್ ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ.
ಮಹಿಳೆ ಕುಟುಂಬಕ್ಕೆ ನೆರವು
ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದು, ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಗಳವಾರ ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯಲ್ಲಿ ತೆಲಂಗಾಣ ರಸ್ತೆಗಳು ಮತ್ತು ಕಟ್ಟಡಗಳು ಮತ್ತು ಸಿನಿಮಾಟೋಗ್ರಫಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರ ಸಮ್ಮುಖದಲ್ಲಿ ಪುಷ್ಪಾ 2 ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಮಹಿಳೆಯ ಕುಟುಂಬಕ್ಕೆ 50 ರೂ. ಲಕ್ಷ ಚೆಕ್ ಹಸ್ತಾಂತರಿಸಿದರು.
ಈ ಸುದ್ದಿಯನ್ನೂ ಓದಿ : Rashmika Mandanna: ʼನನಗೆ ಆಘಾತವಾಗಿದೆ,ಯಾವುದನ್ನೂ ನಂಬಲು ಸಾಧ್ಯವಾಗುತ್ತಿಲ್ಲʼ : ನಟ ಅಲ್ಲು ಅರ್ಜುನ್ ಬಂಧನಕ್ಕೆ ರಶ್ಮಿಕಾ ಆತಂಕ!