ಶ್ರೀನಗರ: ಅಮರನಾಥ ಯಾತ್ರೆ ಮಂಗಳವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಮೇಘಸ್ಫೋಟದ ಪರಿಣಾಮ ಯಾತ್ರೆ ನಿಂತು ಹೋಗಿತ್ತು.
ಯೋಧರು, ಪರ್ವತ ಸುರಕ್ಷಾ ತಂಡ, ಮತ್ತಿತರ ಸಿಬಂದಿ ಪರಿಸ್ಥಿತಿಯನ್ನು ತಹಬದಿಗೆ ತರಲು ತೀವ್ರವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯಪಾಲ ಮನೋಜ್ ಸಿನ್ಹಾ ಅವರು ಅಧಿಕಾರಿಗಳು, ಭದ್ರತಾ ಸಿಬಂದಿ ಜತೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳ ಲಿದ್ದಾರೆ.
ಪ್ರವಾಹ ಬಂದಿದ್ದರೂ ರಸ್ತೆಗಳ ಪರಿಸ್ಥಿತಿ ಚೆನ್ನಾಗಿಯೇ ಇದೆ. ಆದ್ದರಿಂದ ಯಾತ್ರೆ ಮುಂದುವರಿಸಬಹುದು. ಈಗಾಗಲೇ ದರ್ಶನಕ್ಕೆ ಬುಕ್ ಮಾಡಿರುವ ಯಾತ್ರಿ ಗಳಿಗೆ ತೊಂದರೆಯಾಗಬಾರದು ಎನ್ನುವುದು ಸ್ಥಳೀಯ ಸರಕಾರದ ಉದ್ದೇಶ ವಾಗಿದೆ.
ಈ ಬಗ್ಗೆ ಅಂತಿಮ ನಿರ್ಧಾರದ ಅಧಿಕಾರವನ್ನು ಕೇಂದ್ರ ಸರಕಾರ, ಜಮ್ಮು ಕಾಶ್ಮೀರದ ರಾಜ್ಯಪಾಲರಿಗೆ ಬಿಟ್ಟಿದೆ.
ಕಳೆದ ಶುಕ್ರವಾರ ಜಮ್ಮುಕಾಶ್ಮೀರದ ಅಮರನಾಥ ಗುಹಾ ದೇವಸ್ಥಾನದ ಸನಿಹ ಮೇಘಸ್ಫೋಟ ಸಂಭವಿಸಿ, ತೀವ್ರ ಮಳೆ ಸುರಿದಿತ್ತು. ಇದರಿಂದ ಪ್ರವಾಹವುಕ್ಕಿ 16 ಮಂದಿ ಮೃತಪಟ್ಟಿದ್ದರು.
ಭದ್ರತಾ ಸಿಬಂದಿ ಅತ್ಯಾಧುನಿಕ ಸಾಧನಗಳೊಂದಿಗೆ ಪರಿಹಾರ ಕಾರ್ಯಾ ಚರಣೆಯನ್ನು ಎಡೆಬಿಡದೇ ನಡೆಸುತ್ತಿದ್ದಾರೆ.