Sunday, 15th December 2024

ಜೂನ್ 28 ರಂದು ಅಮರನಾಥ ಯಾತ್ರೆ ಆರಂಭ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ನಂತರ ಮೊದಲ ಬಾರಿಗೆ ಅಮರನಾಥ ಯಾತ್ರೆ ನಡೆಯಲಿದ್ದು ಅದರ ದಿನಾಂಕವನ್ನು ನಿಗದಿ ಮಾಡಲಾಗಿದೆ. 2019ರ ಆಗಸ್ಟ್​ 5ರಂದು ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿತ್ತು. ಬಳಿಕ ಕರೊನಾ ಹಿನ್ನೆಲೆಯಲ್ಲಿ ಯಾತ್ರೆ ನಡೆದಿರಲಿಲ್ಲ.

ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಿನಾಂಕ ಫಿಕ್ಸ್ ಆಗಿದೆ. ಜೂನ್ 28 ರಂದು ಯಾತ್ರೆ  ಆರಂಭವಾಗಲಿದೆ. ಮುಕ್ತಾಯವಾಗುವ ದಿನ ಆಗಸ್ಟ್ 3. ಒಟ್ಟು 42 ದಿನಗಳವರೆಗೆ ಪ್ರಯಾಣ ಇರಲಿದೆ. ಕಳೆದ ಬಾರಿ 46 ದಿನಗಳ ಪ್ರಯಾಣವಿತ್ತು.

ಯಾತ್ರೆಗೆ ಹೋಗಬಯಸುವವರಿಗೆ ನೋಂದಣಿಯನ್ನು ಬರುವ ಏಪ್ರಿಲ್​ 1ರಿಂದ ಆರಂಭಿಸಲಾಗುತ್ತಿದೆ. ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಯಾತ್ರಿಕರು ಆದಷ್ಟು ಬೇಗ ಕಾಶ್ಮೀರದಿಂದ ಹೊರಹೋಗುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಭದ್ರತಾ ಸಲಹೆ ನೀಡಿತ್ತು. ಈ ಆಧಾರದ ಮೇಲೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಜೂನ್ 23 ರಿಂದ ಜಗನ್ನಾಥ ಯಾತ್ರೆ ಪ್ರಾರಂಭವಾಗಲಿದೆ. ಆಗಸ್ಟ್ 3 ರಂದು ಸಾವನ್ ಪೂರ್ಣಿಮಾ (ರಕ್ಷಾ ಬಂಧನ್) ದಿನದಂದು ಯಾತ್ರೆ ಕೊನೆಗೊಳ್ಳುತ್ತದೆ. 13 ವರ್ಷಕ್ಕಿಂತ ಕಡಿಮೆ ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ತೀರ್ಥಯಾತ್ರೆ ಮಾಡಲು ಅನುಮತಿ ನೀಡಲಾಗುವುದಿಲ್ಲ.