ಜಮ್ಮು: 7 ಸಾವಿರ ಯಾತ್ರಿಕರ ಹೊಸ ತಂಡ ಜಮ್ಮುವಿನ ಅವಳಿ ಮೂಲ ನೆಲೆಗಳಿಂದ ಶನಿವಾರ ಅಮರನಾಥ ಯಾತ್ರೆ (AmarnathYatra)ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ(SouthKashmir)ದಲ್ಲಿರುವ 3,880 ಮೀಟರ್ ಎತ್ತರದ ಪ್ರದೇಶದಲ್ಲಿರುವ ಅಮರನಾಥ ದೇವಾಲಯ(AmarnathTemple)ಕ್ಕೆ ಜುಲೈ 1ರಂದು ಯಾತ್ರೆ ಪ್ರಾರಂಭವಾಗಿದೆ. 62 ದಿನಗಳ ಈ ಯಾತ್ರೆ ಆಗಸ್ಟ್ 31ರಂದು ಕೊನೆಗೊಳ್ಳಲಿದೆ.
ಒಟ್ಟು 7,392 ಯಾತ್ರಿಕರನ್ನೊಳಗೊಂಡ 13ನೇ ತಂಡ 272 ವಾಹನಗಳಲ್ಲಿ ಬಿಗಿ ಭದ್ರತೆ ನಡುವೆ ಭಗವತಿ ನಗರ್ ಕ್ಯಾಂಪ್‌ನಿಂದ ತೆರಳಿದೆ. ಈ ಪೈಕಿ 4,024 ಯಾತ್ರಿಕರು 146 ವಾಹನಗಳಲ್ಲಿ ಪಹಲ್ಗಾಮ್‌ನಿಂದ ಮತ್ತು 3,368 ಯಾತ್ರಿಕರು 126 ವಾಹನಗಳಲ್ಲಿ ಬಲ್ತಾಲ್‌ನಿಂದ ಬೆಳಗ್ಗೆ 4ರ ಸುಮಾರಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಜೂನ್ 30ರಿಂದ ಇಲ್ಲಿವರೆಗೆ ಒಟ್ಟು 80,181 ಯಾತ್ರಿಕರು ಜಮ್ಮುವಿನ ಮೂಲ ನೆಲೆಗಳಿಂದ ತೆರಳಿದ್ದಾರೆ. ದೇಶದಾದ್ಯಂತ ಇರುವ ಭಕ್ತರು ವಾರ್ಷಿಕ ಅಮರ ನಾಥ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.