Friday, 22nd November 2024

ಅಮರನಾಥ ಯಾತ್ರೆ ಪ್ರಾರಂಭ

ಶ್ರೀನಗರ: ಅಮರನಾಥ ಯಾತ್ರೆ 2024 ಶನಿವಾರ ಪ್ರಾರಂಭವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬೇಸ್ ಕ್ಯಾಂಪ್ ನಿಂದ ಯಾತ್ರಾರ್ಥಿಗಳ ಮೊದಲ ತಂಡ ಪವಿತ್ರ ಗುಹೆಗೆ ತೆರಳಿದೆ.

ಅಮರನಾಥ ದರ್ಶನಕ್ಕೆ ಸುಮಾರು ಮೂರು ಸಾವಿರ ಜನರು ತೆರಳಿದ್ದು, ಮೊದಲ ದಿನ ಆರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಗುಹೆಯಲ್ಲಿ ದರ್ಶನ ಪಡೆಯುವ ನಿರೀಕ್ಷೆಯಿದೆ.

ಅಮರನಾಥ ಯಾತ್ರೆ ಪ್ರತಿ ವರ್ಷ, ಶಿವನಿಗೆ ಅರ್ಪಿತವಾದ ಪವಿತ್ರ ತೀರ್ಥಯಾತ್ರೆಯಾದ ವಾರ್ಷಿಕ ಅಮರನಾಥ ಯಾತ್ರೆಗಾಗಿ ಭಕ್ತರು ಹಿಮಾಲಯಕ್ಕೆ ತಂಡೋಪತಂಡವಾಗಿ ಹೋಗುತ್ತಾರೆ. 2024 ರ ಅಮರನಾಥ ಯಾತ್ರೆ ಈ ವರ್ಷ ಜೂ.29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಕೊನೆಗೊಳ್ಳಲಿದೆ. 52 ದಿನಗಳ ಪ್ರಯಾಸಕರ ಪ್ರಯಾಣವಾದ ಅಮರನಾಥ ಯಾತ್ರೆಯು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥದ ಪವಿತ್ರ ಗುಹಾ ದೇವಾ ಲಯಕ್ಕೆ ಕೈಗೊಳ್ಳಲಾಗುವ ಪೂಜ್ಯ ಹಿಂದೂ ತೀರ್ಥಯಾತ್ರೆಯಾಗಿದೆ.

ಪಹಲ್ಗಾಮ್ ನಿಂದ 29 ಕಿ.ಮೀ ದೂರದಲ್ಲಿರುವ ಈ ಗುಹೆಯು ಹಿಮನದಿಗಳು, ಹಿಮಭರಿತ ಪರ್ವತಗಳಿಂದ ಆವೃತವಾಗಿದೆ ಮತ್ತು ಬೇಸಿಗೆಯಲ್ಲಿ ಸ್ವಲ್ಪ ಸಮಯವನ್ನು ಹೊರತುಪಡಿಸಿ, ಯಾತ್ರಾರ್ಥಿಗಳಿಗೆ ತೆರೆದಿರುತ್ತದೆ.