Thursday, 12th December 2024

ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ

ಶ್ರೀನಗರ: ಜುಲೈ 1 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಈ ಬಾರಿ ಸಂಪೂರ್ಣ ಯಾತ್ರೆಯು ತಂಬಾಕು ಮುಕ್ತವಾಗಲಿದೆ. ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಯಾತ್ರೆಯು ತಂಬಾಕು ಮುಕ್ತ ವಾಗಿರುತ್ತದೆ. ಇದರೊಂದಿಗೆ ‘ಅಮರನಾಥ ಶ್ರೈನ್ ಬೋರ್ಡ್’ ಕೂಡ ಕೆಲವು ನಿಯಮ ಗಳನ್ನು ಮಾಡಿದೆ.

ಇದರ ಪ್ರಕಾರ 2.5 ಕಿ.ಮೀ ಹೈ ರಿಸ್ಕ್ ಮಾರ್ಗದಲ್ಲಿ ಯಾತ್ರಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಲಿದೆ. ಅಷ್ಟೇ ಅಲ್ಲ, ಹೇಸರಗತ್ತೆಯ ಮೇಲೆ ಸವಾರಿ ಮಾಡುವ ಭಕ್ತರಿಗೂ ಹೆಲ್ಮೆಟ್ ಕಡ್ಡಾಯವಾಗಲಿದೆ. ಹೆಲ್ಮೆಟ್ ಅನ್ನು ‘ಶ್ರೇನ್ ಬೋರ್ಡ್’ ಉಚಿತವಾಗಿ ನೀಡ ಲಿದೆ.

1. ಯಾತ್ರಿಕರ ಮೊದಲ ತಂಡವು ಜೂ.30 ರಂದು ‘ಜಮ್ಮು ಭಗವತಿ ನಗರ ಬೇಸ್ ಕ್ಯಾಂಪ್’ನಿಂದ ಹೊರಡಲಿದೆ.

2. ಕಳೆದ ವರ್ಷ ಮೇಘಸ್ಫೋಟದಿಂದ ಪವಿತ್ರ ಗುಹೆಯ ಬಳಿ ಪ್ರವಾಹ ಉಂಟಾಗಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿಗಾ ವಹಿಸಲಾಗಿದೆ.

3. ಜೂನ್ 28 ರ ವೇಳೆಗೆ 3 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಅಂಕಿ ಅಂಶವು ಕಳೆದ ವರ್ಷಕ್ಕಿಂತ ಶೇ.10 ಹೆಚ್ಚಾಗಿದೆ.

Read E-Paper click here

4. ಈ ವರ್ಷ ಯಾವುದೇ ಪ್ರಯಾಣಿಕರಿಗೆ ರಾತ್ರಿಯಲ್ಲಿ ಪವಿತ್ರ ಗುಹೆಯ ಬಳಿ ನಿಲ್ಲಲು ಅನುಮತಿ ನೀಡಲಾಗುವುದಿಲ್ಲ.

ಪಾಕಿಸ್ತಾನದ ನಿರಂತರ ಒಳನುಸುಳುವಿಕೆ ಪ್ರಯತ್ನಗಳು ಮತ್ತು ಅಮರನಾಥ ಯಾತ್ರೆಯ ಭದ್ರತೆಯ ದೃಷ್ಟಿಯಿಂದ ಸಾಂಬಾ ದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ 1 ಕಿ.ಮೀ.ಅಂತರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.