Wednesday, 8th January 2025

Amla Juice Health Benefit: ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಸಿಗುವ ಆರೋಗ್ಯ ಪ್ರಯೋಜನಗಳೇನು?

Amla juice

ಬೆಂಳೂರು: ನೆಲ್ಲಿಕಾಯಿ (Amla)ಯಲ್ಲಿ ಅಪಾರ ಪ್ರಮಾಣದಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳು ಇದ್ದು, ವಾರಕ್ಕೊಮ್ಮೆಯಾದರೂ ನೆಲ್ಲಿಕಾಯಿ ಜ್ಯೂಸ್ ಸವಿಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನೆಲ್ಲಿಕಾಯಿ ಜ್ಯೂಸ್ ಅಥವಾ ರಸದಲ್ಲಿ ಔಷಧೀಯ ಗುಣ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿದ್ದು, ವಿಟಮಿನ್ ಸಿ ಹೆಚ್ಚಾಗಿ ಹೊಂದಿರುವ ನೆಲ್ಲಿಕಾಯಿ ತಲೆ ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ನೀಡುತ್ತದೆ. ಇದರಲ್ಲಿ ಇನ್ನು ಅನೇಕ ಆರೋಗ್ಯಕರ (Amla juice Health Benefit) ಲಾಭ ಇದ್ದು, ಅದರ ಮಾಹಿತಿ ಇಲ್ಲಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ

ಮೊದಲೇ ಹೇಳಿದಂತೆ ಇದರಲ್ಲಿ ವಿಟಮಿನ್ ಸಿ  ಹೇರಳವಾಗಿದ್ದು ನೆಲ್ಲಿಕಾಯಿ  ಜ್ಯೂಸ್  ಕುಡಿಯುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಸ್ಟ್ರಿಂಜೆಂಟ್ ಗುಣ ಹೊಂದಿದ್ದು, ರೋಗಗಳಿಂದ  ದೂರವಿಡಲು ಸಹಾಯ ಮಾಡುತ್ತದೆ. ಹಾಗಾಗಿ ವಾರಕ್ಕೆ ಒಮ್ಮೆಯಾದರೂ ನೆಲ್ಲಿಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಜೀರ್ಣಕ್ರಿಯೆಯನ್ನು  ವೃದ್ದಿಸುತ್ತದೆ

ನೆಲ್ಲಿಕಾಯಿ ಜ್ಯೂಸ್ ಸೇವನೆಯು ಜೀರ್ಣಕ್ರಿಯೆಯನ್ನು ಬಲ ಪಡಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ಕುಡಿಯುವುದು ಆರೋಗ್ಯಕರ ಜೀರ್ಣ ಕ್ರಿಯೆಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಇದ‌‌ರಲ್ಲಿ ಹೆಚ್ಚಿನ ಫೈಬರ್ ಅಂಶ ಇರಲಿದ್ದು, ನಿಯಮಿತ ಕರುಳಿನ ಚಲನೆಯ ಜತೆಗೆ  ಮಲಬದ್ಧತೆ ಮತ್ತು ಜೀರ್ಣಕಾರಿ ಅಸ್ವಸ್ಥತೆಯನ್ನು ತಡೆಯುತ್ತದೆ. ಆಮ್ಲಾ ಜ್ಯೂಸ್ ಗ್ಯಾಸ್ಟ್ರಿಕ್  ಸಮಸ್ಯೆ ಇದ್ದಲ್ಲಿಯು ನಿವಾರಣೆ ಮಾಡಲಿದೆ.

ಚರ್ಮದ ಕಾಂತಿಯನ್ನು ಉತ್ತೇಜಿಸುತ್ತದೆ

ನೆಲ್ಲಿಕಾಯಿ  ಜ್ಯೂಸ್‌ ನಿಯಮಿತ ಸೇವನೆಯಿಂದ ನೈಸರ್ಗಿಕಯುತವಾದ ಚರ್ಮದ ಹೊಳಪನ್ನು ಪಡೆಯಬಹುದು‌. ಜತೆಗೆ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಆಮ್ಲಾ ಜ್ಯೂಸ್ ಆ್ಯಂಟಿ ಆ್ಯಕ್ಸಿಡೆಂಟ್‌ಗಳಿಂದ ತುಂಬಿದ್ದು, ಇದು ಯೌವನದ, ಹೊಳೆಯುವ ಚರ್ಮವನ್ನು ನೀಡುತ್ತದೆ. ಇದು ನೈಸರ್ಗಿಕವಾಗಿ ಮೊಡವೆ ಅಥವಾ ಕಲೆಗಳ ವಿರುದ್ಧ ಹೊರಾಡಲು ನೆರವಾಗುತ್ತದೆ. ಅಲ್ಲದೆ ಚರ್ಮದ ಕಿರಿಕಿರಿ ಮತ್ತು ಮೊಡವೆಗಳನ್ನು ಶಮನಗೊಳಿಸುತ್ತದೆ.

ಕೂದಲಿನ ಆರೋಗ್ಯವನ್ನು ಬೆಂಬಲಿಸುತ್ತದೆ

ನೆಲ್ಲಿಕಾಯಿ ಜ್ಯೂಸ್ ಕೂದಲು ಉದುರುವಿಕೆ ಸಮಸ್ಯೆಗಳಿಗೆ  ಪರಿಹಾರ ನೀಡುತ್ತದೆ. ಕಬ್ಬಿಣ ಮತ್ತು  ಜೀವಸತ್ವಗಳ  ಸಮೃದ್ಧವಾಗಿರುವ ಆಮ್ಲಾ ಜ್ಯೂಸ್ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿ ತಲೆಹೊಟ್ಟು ನಿವಾರಣೆ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ನೆಲ್ಲಿಕಾಯಿ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚುವರಿ ಗ್ಲೂಕೋಸ್ ಅಂಶವನ್ನು  ಹೀರಿಕೊಳ್ಳಲು ದೇಹವನ್ನು ಉತ್ತೇಜಿಸುತ್ತದೆ ಹಾಗೂ ಚಯಾಪಚಯ ಶಕ್ತಿಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಆಮ್ಲಾ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳಷ್ಟು ಒಳಿತು ಆಗಲಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಯಕೃತ್ತಿನ ಕಾರ್ಯವನ್ನು  ವೃದ್ದಿಸುತ್ತದೆ

ಆಮ್ಲಾ ಜ್ಯೂಸ್‌ ಸೇವನೆಯಿಂದ ‌ಯಕೃತ್ತಿನ ಆರೋಗ್ಯವನ್ನು  ಕಾಪಾಡಿಕೊಳ್ಳಬಹುದು‌. ಇದಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್, ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯಕ್ಕೆ ಈ ಜ್ಯೂಸ್ ಸೇವನೆ  ತುಂಬಾ ಒಳ್ಳೆಯದು.

ಮಾನಸಿಕ ಒತ್ತಡ ಕಡಿಮೆ ಮಾಡಲಿದೆ

ನೆಲ್ಲಿಕಾಯಿ ಜ್ಯೂಸ್ ಸೇವನೆಯಿಂದ ಮನಸ್ಸಿಗೆ ರಿಫ್ರೆಶ್ ಅನುಭವ ನೀಡಲಿದೆ. ಈ ಜ್ಯೂಸ್  ಕುಡಿಯುವುದರಿಂದ ಮಾನಸಿಕ ಒತ್ತಡ ಹೆಚ್ಚಿಸುವ ಹಾರ್ಮೋನ್‌ಗಳನ್ನು ನಿಯಂತ್ರಿಸಿ ಮಾನಸಿಕ ಒತ್ತಡ ಕಡಿಮೆ ಮಾಡುವ ಗುಣ ಹೊಂದಿದೆ.

ಇದನ್ನು ಓದಿ: Health Tips: ಕಡಿಮೆ ನೀರು ಕುಡಿಯುವ ಅಭ್ಯಾಸ ಇದೆಯೇ? ಈ ಎಲ್ಲಾ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು

Leave a Reply

Your email address will not be published. Required fields are marked *