Thursday, 3rd October 2024

ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಹತ

ಲಖನೌ: ಉತ್ತರ ಪ್ರದೇಶ ಎಸ್‌ಟಿಎಫ್‌ನ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಹತನಾಗಿದ್ದಾನೆ.

ಕುಖ್ಯಾತ ವಂಚಕ ಅನಿಲ್ ದುಜಾನಾ ದೆಹಲಿಯ ತಿಹಾರ್ ಜೈಲಿನಲ್ಲಿ ಬಹಳ ಕಾಲ ಇದ್ದು, ಸ್ವಲ್ಪ ಸಮಯದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ.

ಜೈಚಂದ್ ಪ್ರಧಾನ್ ಹತ್ಯೆ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ಕೂಡಲೇ ಅನಿಲ್ ದುಜಾನಾ ಪತ್ನಿ ಹಾಗೂ ಸಾಕ್ಷಿ ಸಂಗೀತಾಗೆ ಬೆದರಿಕೆ ಹಾಕಿದ್ದ. ಇದಾದ ನಂತರ ಉನ್ನತ ಅಧಿಕಾರಿಗಳು ಕ್ರಮ ಕೈಗೊಂಡು ಕಳೆದ ವಾರದಲ್ಲಿ ಅನಿಲ್ ದುಜಾನಾ ವಿರುದ್ಧ 2 ಪ್ರಕರಣ ಗಳನ್ನ ದಾಖಲಿಸಿದ್ದಾರೆ. ನೋಯ್ಡಾ ಪೊಲೀಸರ ವಿಶೇಷ ಸೆಲ್ ತಂಡ ಮತ್ತು ಎಸ್‌ಟಿಎಫ್ ತಂಡ ದುಜಾನಾನನ್ನು ಬಂಧಿಸಲು ತೊಡಗಿತ್ತು.

ಕೆಲವು ದಿನಗಳ ಹಿಂದೆ ಯುಪಿ ಸರ್ಕಾರದ ಕಛೇರಿಯಿಂದ ಯುಪಿಯ ಟಾಪ್ 65 ಮಾಫಿ ಯಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.