ಚೆನ್ನೈ: ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಭಾರತದ ಸ್ಟಾರ್ ಕ್ರಿಕೆಟಿಗ ಆರ್ ಅಶ್ವಿನ್ ( R Ashwin) ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಹೇಳುವ ಮೂಲಕ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದರು. ಅಶ್ವಿನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಇದೀಗ ಅಶ್ವಿನ್ ಹೇಳಿಕೆ ಪರ ತಮಿಳು ನಾಡಿನ (Tamil Nadu) ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಬೆಂಬಲಿಸಿದ್ದಾರೆ.
ತಮಿಳುನಾಡಿನ ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಆರ್ ಅಶ್ವಿನ್, “ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಆದರೆ ಅಧಿಕೃತ ಭಾಷೆ” ಎಂದು ಹೇಳಿದ್ದರು. ಇದೀಗ ಅಣ್ಣಾಮಲೈ ಅವರು ಕರೆಕ್ಟ್ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ನನ್ನ ಆತ್ಮೀಯ ಸ್ನೇಹಿತ ಅಶ್ವಿನ್ ಮಾತ್ರವಲ್ಲ, ನಾವೆಲ್ಲರೂ ಅದನ್ನೇ ಹೇಳುತ್ತೇವೆ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು . ಆದರೆ ಹಿಂದಿ ಸಂಪರ್ಕದ ಭಾಷೆಯಾಗಿದೆ. ಇದು ಅನುಕೂಲಕರ ಭಾಷೆಯಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಹಿಂದಿ ರಾಷ್ಟ್ರೀಯ ಭಾಷೆ ಆಗಬೇಕು ಎನ್ನುವವರಿಗೆ ಟಾಂಗ್ ನೀಡಿದ್ದಾರೆ.
ಅಶ್ವಿನ್ ಹೇಳಿದ್ದೇನು?
ಖಾಸಗಿ ಕಾಲೇಜೊಂದರ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್ ಅಶ್ವಿನ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಮತ್ತು ರಾಷ್ಟ್ರೀಯ ಭಾಷೆಗೆ ಸಂಬಂಧಿಸಿ ವಿಷಯಗಳ ಬಗ್ಗೆ ಮಾತನಾಡಿದ್ದರು. ಇಂಗ್ಲಿಷ್ ಅಥವಾ ತಮಿಳಿನಲ್ಲಿ ಯಾರಾದರೂ ಪ್ರಶ್ನೆಯನ್ನು ಕೇಳುತ್ತೀರಾ? ಎಂದಾಗ ವಿದ್ಯಾರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಆದರೆ, ಹಿಂದಿಯಲ್ಲಿ ಪ್ರಶ್ನೆಯನ್ನು ಕೇಳಲು ಯಾರಿಗಾದರೂ ಆಸಕ್ತಿ ಇದೆಯಾ? ಎಂದಾಗ ವಿದ್ಯಾರ್ಥಿಗಳು ಮೌನರಾದರು.
ಭಾರತದಲ್ಲಿನ ಭಾಷೆಯ ಸಮಸ್ಯೆಯ ಬಗ್ಗೆ ಮಾತನಾಡಿದ ಆರ್ ಅಶ್ವಿನ್, “ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ ಹಾಗೂ ಇದು ಕೇವಲ ಅಧಿಕೃತ ಭಾಷೆಯಷ್ಟೆ; ಇದನ್ನು ನಾನು ಹೇಳಲೇಬೇಕು,” ಎಂದು ಸ್ಷಷ್ಟಪಡಿಸಿದ್ದರು.
ತಮಿಳಿಗರು ಹಿಂದಿ ಹೇರಿಕೆಯ ಬಗ್ಗೆ ಮಾತನಾಡಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಎಂಕೆ ಅವರು ಪ್ರಧಾನ ಮಂತ್ರಿ ಕಛೇರಿಗೆ ಬಹಿರಂಗ ಪತ್ರವನ್ನು ಬರೆದಿದ್ದರು. ಅದರಲ್ಲಿ ದಯವಿಟ್ಟು ಪತ್ರಕ್ಕೆ ಉತ್ತರಿಸುವಾಗ ಇಂಗ್ಲೀಷ್‌ನಲ್ಲಿ ಉತ್ತರಿಸಿ ಎಂದು ಹೇಳಿದ್ದರು. ನಂತರ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ತಮಿಳುನಾಡಿನ (Tamil Nadu) ಮೇಲೆ ಹಿಂದಿ ಹೇರಿಕೆ ಪ್ರಯತ್ನಗಳನ್ನು ತಡೆಯಲು ತಮ್ಮ ಮಕ್ಕಳಿಗೆ ತಮಿಳಿನ ಹೆಸರನ್ನು ಇಡಬೇಕು ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ : IPL 2025: ʻಹಿಂದಿ ಹೇರಿಕೆ ಬೇಡ, ಕನ್ನಡ ಬಳಸಿʼ-ಆರ್‌ಸಿಬಿಗೆ ಕನ್ನಡಿಗರಿಂದ ವಾರ್ನಿಂಗ್!