Thursday, 12th December 2024

ಕೋವಿಡ್ ನಿಯಂತ್ರಣಕ್ಕೆ ರಾಜ್ಯವ್ಯಾಪಿ ಸಾಂಕ್ರಾಮಿಕ ತಡೆ ಅಭಿಯಾನ

ನವ ದೆಹಲಿ : ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಜುಲೈ 31 ರ ತನಕ ರಾಜ್ಯವ್ಯಾಪಿ ಸಾಂಕ್ರಾಮಿಕ ತಡೆ ಅಭಿಯಾನವನ್ನು ಉತ್ತರ ಪ್ರದೇಶ ಆರಂಭಿಸಿದೆ. ಸಂಭಾವ್ಯ ಮೂರನೇ ಅಲೆ ಎದುರಿಸಲು ಉತ್ತರ ಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಮುಂದಾದಿದೆ.

ಅಭಿಯಾನದ ಮೂಲಕ ರಾಜ್ಯವ್ಯಾಪಿ ಕೋವಿಡ್ ಸೋಂಕಿನ ಬಗ್ಗೆ ಅರಿವು ಮತ್ತು ಮುಂಜಾಗ್ರತೆ ಒಳಗೊಂಡು ಸೋಂಕು ನಿರೋಧಕ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಮಾಹಿತಿ ನೀಡಿದೆ.

ಇನ್ನು, ಮೆನಿಂಜೈಟಿಸ್ (ಮೆದುಳಿನ ಉರಿಯೂತ) ನನ್ನು ನಿಯಂತ್ರಿಸಲು ಸರ್ಕಾರದ ‘ದಸ್ತಕ್’ಅಭಿಯಾನವು ಜುಲೈ 12 ರಿಂದ 25 ರವರೆಗೆ ನಡೆಯಸಲಾಗು ತ್ತದೆ. ಆಶಾ ಕಾರ್ಯ ಕರ್ತೆಯರು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರ ಮೂಲಕ ಅಭಿಯಾನವು ನಡೆಯಲಿದೆ.

ಕೋವಿಡ್ 19 ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಮಕ್ಕಳಿಗೆ ಉಚಿತ ಔಷಧಿ ಕಿಟ್‌ ಗಳನ್ನು ನೀಡುವುದಾಗಿ ಸರ್ಕಾರ ಹೇಳಿದೆ. 50 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕಿಟ್‌ ಗಳನ್ನು ನೀಡಲಾಗುವುದು. 71 ಲಕ್ಷ ವೈದ್ಯಕೀಯ ಕಿಟ್‌ ಗಳನ್ನು ವಯಸ್ಕರಿಗೆ ಉಚಿತವಾಗಿ ನೀಡಲಾಗುವುದು ಎಂದು ಅದು ತಿಳಿಸಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಸುಮಾರು 18,000 ದಿಂದ ಸುಮಾರು 30,000 ಕ್ಕೆ ಹೆಚ್ಚಿಸಲಾಗುವುದು.

ಪ್ರೌಢ ಶಿಕ್ಷಣ ಇಲಾಖೆಯು ಜುಲೈ 31 ರವರೆಗೆ ಸಾಂಕ್ರಾಮಿಕ ರೋಗ ಜಾಗೃತಿ ಅಭಿಯಾನವನ್ನು ಸಹ ನಡೆಸಲಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹೊಂದಿರುವ ವಾಟ್ಸಾಪ್ ಗ್ರೂಪ್ ಗಳ ಮೂಲಕ ಎಲ್ಲಾ ಸಂಬಂಧಿತ ಚಟುವಟಿಕೆಗಳನ್ನು ನಡೆಸಲಾಗುತ್ತದೆ.