Sunday, 15th December 2024

ಅನುಪಮ್​ ಖೇರ್ ಮೂರನೇ ಕೃತಿ – ಯುವರ್‌ ಬೆಸ್ಟ್‌ ಡೇ ಈಸ್‌ ಟುಡೇ ಕೃತಿ

ಮುಂಬೈ: ಕೋವಿಡ್​-19 ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್​ಡೌನ್​ ಕಾರಣಕ್ಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗರ್ಭಿಣಿಯರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಸಮೀಕ್ಷೆ ಹೇಳಿತ್ತು.

ಆದರೆ ಇದೀಗ ಲಾಕ್​ಡೌನ್​ ಅವಧಿಯಲ್ಲಿನ ತಮ್ಮ ಮೂರನೇ ಮಗುವನ್ನು ನಟ ಅನುಪಮ್​ ಖೇರ್ ಪರಿಚಯಿಸಿದ್ದಾರೆ. ‘ನಿಮ್ಮ ಅತ್ಯುತ್ತಮ ದಿನ ಇಂದೇ’ ಎಂದು ಹೇಳುತ್ತ ಅವರು ತಮ್ಮ ಮೂರನೇ ಮಗುವಿನ ಬಗ್ಗೆ ಇಂದು ಹೇಳಿಕೊಂಡಿದ್ದಾರೆ.

ಇದು ಸಾಮಾನ್ಯ ಅರ್ಥದಲ್ಲಿನ ಮಗುವಲ್ಲ. ಖೇರ್ ತಮ್ಮ ಮೂರನೇ ಕೃತಿಯನ್ನು ಮೂರನೇ ಮಗು ಎನ್ನು ತ್ತಲೇ ಅದರ ಬಗ್ಗೆ ಹೇಳಿದ್ದಾರೆ.

‘ಯುವರ್ ಬೆಸ್ಟ್​ ಡೇ ಈಸ್​ ಟುಡೇ’ ಲೇಖಕನಾಗಿ ನಾನು ನನ್ನ ಮೂರನೇ ಮಗುವನ್ನು ಪರಿಚಯಿಸುತ್ತಿದ್ದೇನೆ. ಇದನ್ನು ಲಾಕ್​ಡೌನ್​ ಸಂದರ್ಭದಲ್ಲಿ ಬರೆದಿದ್ದೇನೆ. ಪ್ರಕಾಶಕರು ದೀಪಾವಳಿಯ ಈ ಶುಭದಿನದಂದು ಹೊಸ ಪುಸ್ತಕದ ಪ್ರಥಮ ಪ್ರತಿ ಕಳುಹಿಸಿಕೊಟ್ಟರು. ಎಂದು ಖೇರ್ ಹೇಳಿದ್ದಾರೆ.