ನಾಗಸ್ವಾಮಿ ಅವರು 1959 ರಿಂದ ಮದ್ರಾಸ್ ಮ್ಯೂಸಿಯಂನಲ್ಲಿ ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು. ನಂತರ 1963 ರಲ್ಲಿ ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಗೆ ಸಹಾಯಕ ವಿಶೇಷ ಅಧಿಕಾರಿಯಾಗಿ ಸೇರಿದರು.
1966 ರಲ್ಲಿ ತಮಿಳುನಾಡಿನ ಮೊದಲ ಪುರಾತತ್ತ್ವ ಶಾಸ್ತ್ರದ ನಿರ್ದೇಶಕರಾಗಿ ನೇಮಕವಾದ ಅವರು 1988 ರಲ್ಲಿ ನಿವೃತ್ತಿಯಾಗುವವರೆಗೂ ಅದೇ ಹುದ್ದೆ ಯಲ್ಲಿಯೇ ಮುಂದುವರೆದಿದ್ದರು. 2018 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದರು.
ತಮಿಳುನಾಡಿನಲ್ಲಿ ಪುರಾತತ್ತ್ವ ಶಾಸ್ತ್ರವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಹತ್ತಿರದ ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಮತ್ತು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದ್ದರು. ರಾಜರಾಜ ಚೋಳ, ರಾಜೇಂದ್ರ ಚೋಳ, ಮಣಿಮೇಖಲೈ, ಅರುಣಗಿರಿ ನಾಥರ್ ಮತ್ತು ಅಪ್ಪರ್ ಅವರ ಜೀವನದಂತಹ ಐತಿಹಾಸಿಕ ವಿಷಯಗಳ ಮೇಲೆ ಹಲವಾರು ನೃತ್ಯ ನಾಟಕಗಳನ್ನು ರಚಿಸಿದ್ದಾರೆ.
ದಕ್ಷಿಣ ಭಾರತದ ಕಂಚಿನ ಮೇರುಕೃತಿಗಳು ಮತ್ತು ಶಿವಭಕ್ತಿ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.