Sunday, 15th December 2024

ಅರುಣಾಚಲ ಪ್ರದೇಶ ಕರೋನಾ ಮುಕ್ತ ರಾಜ್ಯ

ಇಟಾನಗರ: ಲೋಹಿತ್​ ಜಿಲ್ಲೆಯಲ್ಲಿದ್ದ ಸೋಂಕಿತ ವ್ಯಕ್ತಿಯು ಗುಣಮುಖರಾದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಕರೋನಾ ಮುಕ್ತ ರಾಜ್ಯವಾಗಿ ಬದಲಾಗಿದೆ.

ಈಶಾನ್ಯ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 64,188 ಇದ್ದು ಇಲ್ಲಿಯವರೆಗೆ 296 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ಹೊಸ ಕೊರೊನಾ ಪ್ರಕರಣ ವರದಿಯಾಗಿಲ್ಲ.

ಅರುಣಾಚಲ ಪ್ರದೇಶದಲ್ಲಿ ಇಲ್ಲಿಯವರೆಗೆ 16,58,536 ಮಂದಿ ಕೊರೊನಾ ಲಸಿಕೆಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.