Sunday, 15th December 2024

ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಕಿಬಿತು: ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಅರುಣಾಚಲ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದು, ಶಾ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಚೀನಾದ ವಿದೇಶಾಂಗ ಸಚಿವರ ವಕ್ತಾರರು, ‘ಇದು ಗಡಿ ಸ್ನೇಹಿಯಲ್ಲ, ಗೃಹ ಸಚಿವರ ಭೇಟಿ ಯು ಚೀನಾದ ಪ್ರಾದೇಶಿಕ ಸಾರ್ವ ಭೌಮತ್ವವನ್ನ ಉಲ್ಲಂಘಿಸಿದೆ ಮತ್ತು ಜಂಗ್ನಾನ್ ಪ್ರದೇಶ ವು ಚೀನಾದ ಪ್ರದೇಶವಾಗಿರುವುದರಿಂದ ಚೀನಾ ಅದನ್ನ ವಿರೋಧಿ ಸುತ್ತದೆ’ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಸ್ಸಾಂನ ದಿಬ್ರುಗಢ್ ತಲುಪಿದ್ದು, ಅಲ್ಲಿ ಸಿಎಂ ಹಿಮಂತ ಬಿಸ್ವ ಶರ್ಮಾ ಅವರನ್ನ ಸ್ವಾಗತಿಸಿದರು. ಭಾರತ-ಚೀನಾ ಗಡಿಯಲ್ಲಿರುವ ಕಿಬಿತು ಎಂಬ ಗ್ರಾಮದಲ್ಲಿ ‘ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ’ ಆರಂಭಿಸಲಿದ್ದಾರೆ.

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಿಬಿತು ಎಂಬಲ್ಲಿ ಐಟಿಬಿಪಿ ಸಿಬ್ಬಂದಿ ಯೊಂದಿಗೆ ಸಂವಾದ ನಡೆಸಲಿದ್ದಾರೆ. ಅಸ್ಸಾಂನ ದಿಬ್ರುಗಢದಲ್ಲಿ ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಮಾತನಾಡುವುದಲ್ಲದೇ, ಗೃಹ ಸಚಿವರು ಮಂಗಳವಾರ ಬಿಜೆಪಿಯ ಜಿಲ್ಲಾ ಕಚೇರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಗೃಹ ಸಚಿವರು ಏ.11ರಂದು ನಮ್ತಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮತ್ತು ವಾಲೋಂಗ್ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ‘ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ’ (ವಿವಿಪಿಎಟಿ) ಪ್ರಾರಂಭಿಸಿದೆ.