Thursday, 2nd January 2025

Arvind Kejriwal: ʻಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯನ್ನು ಬಂಧಿಸಿʼ- ಪಟ್ಟು ಹಿಡಿದ ಕೇಜ್ರಿವಾಲ್‌

Arvind Kejriwal

ನವದೆಹಲಿ: ರೋಹಿಂಗ್ಯಾಗಳ ಅಕ್ರಮ ವಲಸೆ ವಿಚಾರವಾಗಿ ಭಾರತೀಯ ಜನತಾ ಪಕ್ಷ (BJP) ಮತ್ತು ಆಮ್ ಆದ್ಮಿ ಪಕ್ಷ (AAP) ನಡುವೆ ಜಟಾಪಟಿ ನಡೆದಿದೆ. ದೆಹಲಿಯಲ್ಲಿ ರೋಹಿಂಗ್ಯಾಗಳ ಅಕ್ರಮ ವಲಸೆ ವಿವಾದದ ನಡುವೆ ಸೋಮವಾರ ಹರ್ದೀಪ್ ಸಿಂಗ್ ಪುರಿ (Hardeep Puri) ಅವರನ್ನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಟೀಕಿಸಿದ್ದಾರೆ ಮತ್ತು ಕೇಂದ್ರ ಸಚಿವರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ನರೇಂದ್ರ ಮೋದಿ (Narendra Modi) ಸರ್ಕಾರದ ಎರಡನೇ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಪುರಿ ಅವರು ರಾಷ್ಟ್ರ ರಾಜಧಾನಿಯಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ಎಲ್ಲಿ ನೆಲೆಸಿದರು ಎಂಬ ಎಲ್ಲಾ ಡೇಟಾವನ್ನು ಬಹಿರಂಗಪಡಿಸಿದ್ದಾರೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಜ್ರಿವಾಲ್‌ ಹರ್ದೀಪ್ ಸಿಂಗ್ ಪುರಿ ಅವರನ್ನು ಬಂಧಿಸಲು ನಾನು ಅವರನ್ನು ವಿನಂತಿಸುತ್ತೇನೆ. ಅವರು ರೋಹಿಂಗ್ಯಾಗಳನ್ನು ಎಲ್ಲಿ ಮತ್ತು ಹೇಗೆ ನೆಲೆಸಿದರು ಎಂಬ ಎಲ್ಲಾ ಡೇಟಾ ಅವರ ಬಳಿ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ದೀಪ್ ಸಿಂಗ್ ಪುರಿ ಕೇಜ್ರಿವಾಲ್‌ ಜೈಲಿಗೆ ಹೋಗಿ ಬಂದಾಗಿನಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಕೇಜ್ರಿವಾಲ್ ಮತ್ತು ದೆಹಲಿಯ ಎಎಪಿ ಸರ್ಕಾರವು ರೋಹಿಂಗ್ಯಾಗಳನ್ನು ಮತಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಲು ಸಹಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 15 ರಿಂದ ಅವರ (ಬಿಜೆಪಿ) ‘ಆಪರೇಷನ್ ಕಮಲ’ ನಡೆಯುತ್ತಿದೆ. ಈ 15 ದಿನಗಳಲ್ಲಿ ಅವರು 5,000 ಮತಗಳನ್ನು ಅಳಿಸಲು ಮತ್ತು ಕೆಲ ಹೊಸ ಮತದಾರರ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ : Arvind Kejriwal : ತಿಹಾರಿ ಜೈಲಲ್ಲಿ ಟಾರ್ಚರ್ ಕೊಟ್ರು, ಹರಿಯಾಣ ರ್ಯಾಲಿಯಲ್ಲಿ ಕೇಜ್ರಿವಾಲ್‌ ಹೇಳಿಕೆ