Wednesday, 8th January 2025

Asaram Bapu: ಅತ್ಯಾಚಾರ ಪ್ರಕರಣ; ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು!

ಗಾಂಧಿನಗರ: ಅತ್ಯಾಚಾರ ಎಸಗಿದ ಆರೋಪದಡಿ ಒಂದು ದಶಕದಷ್ಟು ಹಳೆಯ ಪ್ರಕರಣದಲ್ಲಿ ಬಂಧಿತನಾಗಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ(Asaram Bapu) ವೈದ್ಯಕೀಯ ಚಿಕಿತ್ಸೆಗಾಗಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

83 ವರ್ಷದ ಅಸಾರಾಮ್‌ ಬಾಪು 2013 ರಲ್ಲಿ ಜೋಧ್‌ಪುರದ(Jodhpur) ತನ್ನ ಆಶ್ರಮದಲ್ಲಿ ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪ ಕೇಳಿಬಂದಿತ್ತು(Physical Assault). ಪ್ರಕರಣದಲ್ಲಿ ಅವನನ್ನು ಬಂಧಿಸಿ ಅಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್‌ ವೈದ್ಯಕೀಯ ಚಿಕಿತ್ಸೆಗಾಗಿ ಮಾರ್ಚ್ 31ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಯಾವುದೇ ರೀತಿಯಲ್ಲೂ ತನ್ನ ಅನುಯಾಯಿಗಳನ್ನು ಭೇಟಿಯಾಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆಸ್ಪತ್ರೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್‌ ಪೊಲೀಸರಿಗೆ ನೀಡಿದೆ. ಅಸಾರಾಂ ಚಿಕಿತ್ಸೆಯನ್ನು ಎಲ್ಲಿ ಬೇಕಾದರೂ ಪಡೆಯಲಿ. ಅದಕ್ಕೆ ಅಡ್ಡಿಯಾಗಬೇಡಿ ಎಂತಲೂ ಹೇಳಿದೆ. ಮಧ್ಯಂತರ ಜಾಮೀನು ಕೋರಿದ್ದ ಅಸಾರಾಂ ಪರ ವಕೀಲರು ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಅಸಾರಾಂ ಗೆ ಕಳೆದ ವರ್ಷ ಪುಣೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಚೇತರಿಕೆ ಕಂಡ ಕೂಡಲೇ ಜೋಧ್‌ಪುರದ ಏಮ್ಸ್‌ಗೆ ದಾಖಲಿಸಲಾಗಿತ್ತು.

ಅಸಾರಾಂ ಬಾಪು ಅತ್ಯಾಚಾರ ಪ್ರಕರಣ

2013ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 2018ರ ಏಪ್ರಿಲ್‌ನಲ್ಲಿ ಜೋಧ್‌ಪುರದ ನ್ಯಾಯಾಲಯವು ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೇ ಪ್ರಕರಣದಲ್ಲಿ ಆತನ ಇಬ್ಬರು ಸಹಚರರಿಗೆ ನ್ಯಾಯಾಲಯವು 2023ರಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2013 ರಲ್ಲಿ ಆಶ್ರಮದಲ್ಲಿ ಸೂರತ್ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಅಸಾರಾಂ ಬಾಪು ಮೇಲಿದೆ. ಸತತ ಐದು ವರ್ಷಕ್ಕೂ ಹೆಚ್ಚು ಸಮಯ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ ಅವನಿಗೆ ಶಿಕ್ಷೆ ವಿಧಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Physical Assault: ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ; ಆರೋಪಿ ಅರೆಸ್ಟ್!

Leave a Reply

Your email address will not be published. Required fields are marked *