ದುಬೈ: ಗಾಯಕಿ ಆಶಾ ಭೋಸ್ಲೆ(Asha Bhosle) ಲೆಜೆಂಡರಿ ಗಾಯಕಿ. ಅವರು ತಮ್ಮ ಸಿರಿ ಕಂಠದ ಗಾಯನದಿಂದ ಕಳೆದ ಏಳೆಂಟು ದಶಕಗಳಿಂದ ಮನೆ ಮಾತಾಗಿದ್ದಾರೆ. ಭಾರತವಷ್ಟೇ ಅಲ್ಲದೆ, ಜಗತ್ತಿನಾದ್ಯಂತ ತಮ್ಮದೇ ಛಾಪು ಮೂಡಿಸಿದ್ದಾರೆ. ಸದ್ಯ ಆಶಾ ಭೋಸ್ಲೆ ಅವರಿಗೆ 91 ವರ್ಷ ವಯಸ್ಸಾಗಿದ್ದು,ಈಗಲೂ ಎನರ್ಜಿಯಿಂದ ಹಾಡುತ್ತಾ ಕುಣಿಯುತ್ತಾರೆ. ಅವರು ಭಾನುವಾರ(ಡಿ.29) ದುಬೈನಲ್ಲಿ ನಡೆದ ತಮ್ಮ ಸಂಗೀತ ಕಛೇರಿಯಲ್ಲಿ ಕರಣ್ ಔಜ್ಲಾ ಅವರ ಸೂಪರ್ ಹಿಟ್ ‘ತೌಬಾ ತೌಬಾ’ ಹಾಡನ್ನು ಹಾಡುವ ಮೂಲಕ ಸಖತ್ ವೈರಲ್ ಆಗಿದ್ದಾರೆ. ಹಾಡುವುದಷ್ಟೇ ಅಲ್ಲದೆ ಸೊಂಟ ಕುಣಿಸಿಕೊಂಡು ಡ್ಯಾನ್ಸ್ ಕೂಡ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಖುಷಿಯಾಗಿದ್ದು,”ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.(Viral Video)
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ ದುಬೈನಲ್ಲಿ ಹಾಡಿದ ಹಾಡಿನ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಬೆರಗಾಗಿದ್ದಾರೆ. 91 ವರ್ಷ ವಯಸ್ಸಿನ ಗಾಯಕಿ ಕರಣ್ ಔಜ್ಲಾ ಅವರ ಹಿಟ್ ಸಾಂಗ್ ತೌಬಾ ತೌಬಾವನ್ನು ದುಬೈ ಸಂಗೀತ ಕಛೇರಿಯಲ್ಲಿ ಹಾಡಿದ್ದು, ಇಳಿ ವಯಸ್ಸಿನಲ್ಲೂ ಹಾಡಿಗೆ ಹೆಜ್ಜೆ ಹಾಕುತ್ತಾ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ.
ಆಶಾ ಅವರು ಹೆಜ್ಜೆ ಹಾಕಿದ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾನುವಾರ ದುಬೈನಲ್ಲಿ ಸಾವಿರಾರು ಶ್ರೋತೃಗಳಿಗಾಗಿ ಆಶಾ ಭೋಸ್ಲೆ ಹಾಡುವುದನ್ನು ವಿಡಿಯೊದಲ್ಲಿ ಕಾಣಬಹುದು. ತಮ್ಮ ಕಛೇರಿ ಮಧ್ಯೆ ಅವರು ತೌಬಾ ತೌಬಾ ಹಾಡಲು ಪ್ರಾರಂಭಿಸಿದಾಗ ಎಲ್ಲರು ಆಶ್ಚರ್ಯಚಕಿತರಾಗಿದ್ದಾರೆ. ಪ್ರೇಕ್ಷಕರು ಜೋಶ್ ನಿಂದ ಕೂಗಿಕೊಳ್ಳುತ್ತಿದ್ದಂತೆ ಗಾಯಕಿ ತಮ್ಮ ಕಾಲನ್ನು ಪಕ್ಕಕ್ಕೆ ಸರಿಸಿ ಕೈ ಮೇಲೆ ಮಾಡುತ್ತಾ ಸೊಂಟ ಅಲ್ಲಾಡಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ.
ವಿಡಿಯೊಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು 91ನೇ ವಯಸ್ಸಿನಲ್ಲಿ ಹಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. “ಇದು ಎಷ್ಟು ಮುದ್ದಾಗಿದೆ! ಅವರು 91ನೇ ವಯಸ್ಸಿನಲ್ಲಿ ಹಾಡು ಹೇಳುತ್ತಾ ಡ್ಯಾನ್ಸ್ ಮಾಡಿದ್ದಾರೆ. ಇದು ಪವಾಡವೇ ಸರಿ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಅಬ್ಬಾ! ಲೆಜೆಂಡರಿ ಗಾಯಕಿ. ಆಶಾ ಭೋಸ್ಲೆ ದಂತಕಥೆ. ಈ ವಿಡಿಯೊ ತುಂಬಾ ಅದ್ಭುತವಾಗಿದೆ” ಎಂದಿದ್ದಾರೆ. ಈ ವಿಡಿಯೊವನ್ನು ಹಾಡಿನ ನೃತ್ಯ ಸಂಯೋಜಕ ಬಾಸ್ಕೋ ಮಾರ್ಟಿಸ್ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ನಂತರ, ಕರಣ್ ಔಜ್ಲಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದು , “@asha.bhosle ji, ಸಂಗೀತದ ಜೀವಂತ ದೇವತೆ” ಎಂದಿದ್ದಾರೆ. “ಈ ಹಾಡು ಅಭಿಮಾನಿಗಳು ಮಾತ್ರವಲ್ಲದೆ ಸಂಗೀತ ಕಲಾವಿದರ ನಡುವೆ ಸಾಕಷ್ಟು ಪ್ರೀತಿ ಮತ್ತು ಮನ್ನಣೆಯನ್ನು ಪಡೆದುಕೊಂಡಿದೆ, ಆದರೆ ಈ ಕ್ಷಣವು ನಿಜವಾಗಿಯೂ ಅದ್ಭುತ. ನಾನು ಎಂದಿಗೂ ಮರೆಯುವುದಿಲ್ಲ. ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನನಗೆ ಸ್ಫೂರ್ತಿ ನೀಡಿದೆ” ಎಂದು ಬಾಸ್ಕೋ ಮಾರ್ಟಿಸ್ ಹೇಳಿದ್ದಾರೆ. ದುಬೈನಲ್ಲಿ ನಡೆದ ಕಛೇರಿಯಲ್ಲಿ ಆಶಾ ಭೋಂಸ್ಲೆ ಅವರೊಂದಿಗೆ, ಸೋನು ನಿಗಮ್ ಕೂಡ ವೇದಿಕೆ ಹಂಚಿಕೊಂಡು ತಮ್ಮ ಗಾಯನದ ಮೂಲಕ ಸಂಗೀತ ರಸಿಕರ ಮನಸ್ಸನ್ನು ಗೆದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ದುಬಾರಿ ಮದುವೆ; ವಧುವಿನ ಮನೆ ಮೇಲೆ ವಿಮಾನದಿಂದ ಹಣದ ಸುರಿಮಳೆ: ವಿಡಿಯೊ ವೈರಲ್