ಡಿಸ್ಪುರ: ಅಸ್ಸಾಂನ(Assam) ದೀಮಾ ಹಸಾವೋ(Dima Hasao) ಜಿಲ್ಲೆಯ ಕಲ್ಲಿದ್ದಲು ಗಣಿಗೆ ಏಕಾಏಕಿ ನೀರು ನುಗ್ಗಿ ಉಂಟಾದ ದುರಂತದಲ್ಲಿ ನಾಪತ್ತೆ ಆಗಿರುವವರ 9 ಮಂದಿಯ ಪೈಕಿ ನಾಲ್ಕು ಕಾರ್ಮಿಕರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ(Assam Mine Accident).
The identity of the recovered body has been confirmed as Ligen Magar, aged approximately 27 years, a resident of 1 No. Umrangshu, Dima Hasao, Assam. https://t.co/jKQ2tuUIKU
— Himanta Biswa Sarma (@himantabiswa) January 11, 2025
ಉಳಿದ 5 ಮಂದಿಯನ್ನು ಪಾರು ಮಾಡಲು ಬಿರುಸಿನ ಶೋಧ ಕೈಗೊಳ್ಳಲಾಗಿದೆ ಎಂದು ಸೇನೆಯ ಮುಳುಗು ತಜ್ಞರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಒಂಬತ್ತು ಕಾರ್ಮಿಕರ ಪೈಕಿ ಒಬ್ಬರ ಶವ ಪತ್ತೆಯಾಗಿತ್ತು. ಇಂದು ಮೂವರು ಕಾರ್ಮಿಕರ ಮೃತ ದೇಹಗಳು ಪತ್ತೆಯಾಗಿದ್ದು, ಒಟ್ಟು ನಾಲ್ವರು ಈವರೆಗೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ 30 ಸದಸ್ಯರ ತಂಡವೊಂದು ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದೆ. ಇದರೊಂದಿಗೆ, ರಾಜ್ಯ ವಿಪತ್ತು ಸ್ಪಂದನಾ ಪಡೆಯ ಎಂಟು ಸಿಬ್ಬಂದಿಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ. ಮೇಘಾಲಯದ ಗಡಿಗೆ ಹೊಂದಿಕೊಂಡಿರುವ ಅಸ್ಸಾಂನ ಅಕ್ರಮ ಗಣಿಯೊಂದಕ್ಕೆ ನೀರು ನುಗ್ಗಿದ್ದರಿಂದ, ಸುಮಾರು 18 ಮಂದಿ ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ಎರಡು ಮೋಟರ್ ಪಂಪ್ಗಳನ್ನು ಬಳಸಿ, ನೀರು ಹೊರ ಹಾಕುವ ಕೆಲಸಕ್ಕೆ ಚಾಲನೆ ನೀಡಿದ್ದರು.
ಇದೇ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ನೌಕಾಪಡೆಯ ಮುಳುಗು ತಜ್ಞರು ನಿರತರಾಗಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. “ಸ್ಥಳೀಯ ತಂಡದ ಮೌಲ್ಯಮಾಪನದ ಪ್ರಕಾರ ಗಣಿ ಒಳಗೆ ನೀರಿನ ಮಟ್ಟವು ಸುಮಾರು 100 ಅಡಿಗಳಿಗೆ ಏರಿದೆ. ಹೀಗಾಗಿ ವಿಶಾಖಪಟ್ಟಣಂ ಮುಳುಗು ತಜ್ಞರಿಗೆ ಬುಲಾವ್ ನೀಡಲಾಗಿತ್ತು. ಮುಳುಗು ತಜ್ಞರು ತಮ್ಮ ಜೊತೆ ರಕ್ಷಣಾ ಪರಿಕರಗಳನ್ನು ತಂದಿದ್ದಾರೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಕಲ್ಲಿದ್ದಲು ಗಣಿ ದುರಂತಗಳು ಈಶಾನ್ಯ ಭಾರತದಲ್ಲಿ ಸಾಮಾನ್ಯವಾಗಿದ್ದು, ಈ ಹಿಂದೆ ಜನವರಿ 2024ರಲ್ಲಿ, ನಾಗಲ್ಯಾಂಡ್ನ ವೋಖಾ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅಂತೆಯೇ ಮೇ ತಿಂಗಳಲ್ಲಿ, ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಗಣಿ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು.
ಸೆಪ್ಟೆಂಬರ್ 2022 ರಲ್ಲಿ, ಅದೇ ಜಿಲ್ಲೆಯಲ್ಲಿ ಶಂಕಿತ ವಿಷಕಾರಿ ಅನಿಲ ಸೋರಿಕೆಯಾಗಿ ಮೂವರು ಕಲ್ಲಿದ್ದಲು ಗಣಿಗಾರರು ದಾರುಣವಾಗಿ ಸಾವನ್ನಪ್ಪಿದ್ದರು. ಡಿಸೆಂಬರ್ 13, 2018 ರಂದು ಮೇಘಾಲಯದ ಕ್ಸಾನ್ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಇಲಿ-ಹೋಲ್ ಕಲ್ಲಿದ್ದಲು ಗಣಿಯಲ್ಲಿ 15 ಕಾರ್ಮಿಕರು ಅಸುನೀಗಿದ್ದರು.
ಈ ಸುದ್ದಿಯನ್ನೂ ಓದಿ:Murder Case: ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ವ್ಯಕ್ತಿಯ ಬರ್ಬರ ಕೊಲೆ; ಐವರು ವಶಕ್ಕೆ